ಕರ್ನಾಟಕ

karnataka

ETV Bharat / city

ತುಮಕೂರು ಹೇಮಾವತಿ ಕಚೇರಿ ಮೇಲೆ ಎಸಿಬಿ ದಾಳಿ.. ಮುಂದುವರಿದ ಶೋಧ - ಕರ್ನಾಟಕದಲ್ಲಿ ಎಸಿಬಿ ದಾಳಿ

ತುಮಕೂರಿನ ಹೇಮಾವತಿ ಕಚೇರಿಯ ಭೂಸ್ವಾಧೀನ ವಿಭಾಗದ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಹೇಮಾವತಿ ಕಚೇರಿ ಮೇಲೆ ಎಸಿಬಿ ದಾಳಿ,ACR Raid On Hemavati Office in Tumakuru
ಹೇಮಾವತಿ ಕಚೇರಿ ಮೇಲೆ ಎಸಿಬಿ ದಾಳಿ

By

Published : Dec 7, 2021, 5:21 PM IST

ತುಮಕೂರು:ರೈತರಿಗೆ ಪರಿಹಾರ ಕೊಡುವಲ್ಲಿ ಅಕ್ರಮ ಎಸಗಿರುವ ಆರೋಪ ಹಿನ್ನೆಲೆಯಲ್ಲಿ ತುಮಕೂರಿನ ಹೇಮಾವತಿ ಕಚೇರಿಯ ಭೂಸ್ವಾಧೀನ ವಿಭಾಗದ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೆಳಗ್ಗೆಯಿಂದ ದಾಳಿ ಮುಂದುವರೆಸಿರುವ ಅಧಿಕಾರಿಗಳು ಕಚೇರಿಯಲ್ಲಿದ್ದ ದಾಖಲಾತಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಜಿಲ್ಲೆಯ ವ್ಯಾಪ್ತಿಯಲ್ಲಿ ಸಾವಿರಾರು ರೈತರು ಹೇಮಾವತಿ ನಾಲೆಗಾಗಿ ಜಮೀನು ನೀಡಿದ್ದಾರೆ. ಆದರೆ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಪರಿಹಾರ ನೀಡಿಲ್ಲವೆಂದು ಆರೋಪಿಸಿದ್ರು. ಅಲ್ಲದೆ ಪರಿಹಾರ ನೀಡಲು ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆಂಬ ಆರೋಪ ಕೂಡ ಕೇಳಿ ಬಂದಿತ್ತು.

ಈ ಹಿನ್ನೆಲೆಯಲ್ಲಿ ತುಮಕೂರು ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ಹೇಮಾವತಿ ಕಚೇರಿ ಮೇಲೆ ಎಸಿಬಿ ದಾಳಿ

(ಇದನ್ನೂ ಓದಿ: ಬೆಂಜ್ ಕಾರಿನ ಓವರ್ ಸ್ಪೀಡ್.. ಬೆಂಗಳೂರಿನಲ್ಲಿ ವಾಹನಗಳ ಸರಣಿ ಅಪಘಾತ..)

ABOUT THE AUTHOR

...view details