ತುಮಕೂರು:ಖಾಸಗಿ ಬಸ್ ಹಾಗೂ ಗೂಡ್ಸ್ ವಾಹನದ ನಡುವೆ ನಡೆದ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತುಮಕೂರು ತಾಲೂಕಿನ ತುಮಕೂರು-ಶಿವಮೊಗ್ಗ ಹೆದ್ದಾರಿಯಲ್ಲಿರುವ ಗೊಲ್ಲಹಳ್ಳಿ ಸಮೀಪ ಸಂಭವಿಸಿದೆ.
ಹಾಸನದಿಂದ ಅರಸೀಕೆರೆ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ಮತ್ತು ತುಮಕೂರಿನಿಂದ ಹೂ ಕೊಂಡೊಯ್ಯುತ್ತಿದ್ದ ರೈತರಿದ್ದ ಗೂಡ್ಸ್ ವಾಹನದ ನಡುವೆ ಮುಂಜಾನೆ 5.30ರ ವೇಳೆಗೆ ಅಪಘಾತ ಜರುಗಿದೆ. ಓರ್ವ ವ್ಯಕ್ತಿಗೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.