ಕರ್ನಾಟಕ

karnataka

ETV Bharat / city

ರಜೆ ನಗದೀಕರಣ ಮಾಡಲು ಲಂಚ ಬೇಡಿಕೆ; ಎಸಿಬಿ ಬಲೆಗೆ ಎಸ್​ಡಿಎ - ಕೆಂಪೇಗೌಡ ಅನುದಾನಿತ ಪ್ರೌಢಶಾಲೆಯ ಎಸ್​ಡಿಎ ಎಸಿಬಿ ಬಲೆಗೆ

ರಜೆ ನಗದೀಕರಣ ಮಾಡಲು 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕುಣಿಗಲ್ ತಾಲೂಕು ಹುಲಿಯೂರುದುರ್ಗ ಕೆಂಪೇಗೌಡ ಅನುದಾನಿತ ಪ್ರೌಢಶಾಲೆಯ ಎಸ್​ಡಿಎ ಗೋಪಾಲಸ್ವಾಮಿ ಮತ್ತು ಸಿಬ್ಬಂದಿ ಬೆಟ್ಟಸ್ವಾಮಿ ಅವರನ್ನು ಎಸಿಬಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

acb-ride-on-kempegowda-funded-high-school-sda
ಎಸಿಬಿ

By

Published : Feb 12, 2021, 6:52 PM IST

Updated : Feb 12, 2021, 7:21 PM IST

ತುಮಕೂರು : ರಜೆ ನಗದೀಕರಣ ಮಾಡಿಸಿಕೊಡಲು ಲಂಚಕ್ಕೆ ಬೇಡಿಕೆ ಇರಿಸಿದ್ದ ಕೆಂಪೇಗೌಡ ಅನುದಾನಿತ ಪ್ರೌಢಶಾಲೆಯ ಎಸ್​ಡಿಎ ಹಾಗೂ ನಿವೃತ್ತ ಸಿಬ್ಬಂದಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಜೆ ನಗದೀಕರಣ ಮಾಡಲು ಲಂಚ ಬೇಡಿಕೆ

ಕುಣಿಗಲ್ ತಾಲೂಕು ಹುಲಿಯೂರುದುರ್ಗ ಕೆಂಪೇಗೌಡ ಅನುದಾನಿತ ಪ್ರೌಢಶಾಲೆಯ ಎಸ್​ಡಿಎ ಗೋಪಾಲಸ್ವಾಮಿ ಮತ್ತು ನಿವೃತ್ತ ಸಿಬ್ಬಂದಿ ಬೆಟ್ಟಸ್ವಾಮಿ ಎಂಬುವರು ರಜೆ ನಗದೀಕರಣ ಮಾಡಿಸಿಕೊಡಲು 20 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಕುಣಿಗಲ್ ತಾಲೂಕು ಅಮೃತೂರು ಹೋಬಳಿಯ ಜನ್ನಾಗರ ಗ್ರಾಮದ ಶ್ರೀನಿವಾಸ್​ ಎಂಬುವರು ಎಸಿಬಿಗೆ ದೂರು ನೀಡಿದ್ದರು.

ಅದರಂತೆ ಶ್ರೀನಿವಾಸ್​ರಿಂದ 20 ಸಾವಿರ ರೂಪಾಯಿ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳಾದ ಗೋಪಾಲಸ್ವಾಮಿ ಮತ್ತು ಬೆಟ್ಟಸ್ವಾಮಿ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ.

Last Updated : Feb 12, 2021, 7:21 PM IST

ABOUT THE AUTHOR

...view details