ತುಮಕೂರು: ನಗರದ ಟೌನ್ ಹಾಲ್ ವೃತ್ತದಲ್ಲಿ ಟ್ರಾಫಿಕ್ ಪೊಲೀಸ್ ಕೂರುವ ಕುರ್ಚಿಯಲ್ಲಿ ಖಾವಿಧಾರಿವೋರ್ವ ಕುಳಿತು ಮಂಗನಾಟ ಪ್ರದರ್ಶಿಸಿದ ಘಟನೆ ನಡೆದಿದೆ.
ಕಣ್ಣಿಗೆ ಕೂಲಿಂಗ್ ಗ್ಲಾಸ್, ಮೈಮೇಲೆ ಖಾವಿ... ಈತನ ವಿಸಿಲ್ಗೆ ಬೆಚ್ಚಿಬಿದ್ದ ವಾಹನ ಸವಾರರು - A Stranger controlling traffic in Tumkur
ಶನಿವಾರ ಮಧ್ಯಾಹ್ನ ತುಮಕೂರು ನಗರದ ಟೌನ್ ಹಾಲ್ ವೃತ್ತದಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಖಾವಿಧಾರಿವೋರ್ವ ಕೂಲಿಂಗ್ ಗ್ಲಾಸ್ ಹಾಗೂ ಕೊರಳಲ್ಲಿ ವಿಸಿಲ್ ಹಾಕಿಕೊಂಡು ಟ್ರಾಫಿಕ್ ಕಂಟ್ರೋಲ್ ಮಾಡುತ್ತಾ ಮಂಗನಾಟ ಪ್ರದರ್ಶಿಸಿರುವ ವಿಡಿಯೋವೊಂದು ವೈರಲ್ ಆಗಿದೆ.

ಶನಿವಾರ ಮಧ್ಯಾಹ್ನ ಸುಮಾರು ಒಂದೂವರೆ ಗಂಟೆಗಳ ಕಾಲ ಈ ಖಾವಿಧಾರಿ ಕೂಲಿಂಗ್ ಗ್ಲಾಸ್ ಹಾಗೂ ಕೊರಳಲ್ಲಿ ವಿಸಿಲ್ ಹಾಕಿಕೊಂಡು ಟ್ರಾಫಿಕ್ ಕಂಟ್ರೋಲ್ ಮಾಡುತ್ತಿದ್ದ. ಈತನ ವಿಸಿಲ್ಗೆ ವಾಹನ ಸವಾರರು ಕಂಗಾಲಾಗಿದ್ದರು. ಇನ್ನೂ ಕೆಲವರು ಈತನ ವೇಷಭೂಷಣವನ್ನು ಕಂಡು ನಗುತ್ತಾ ಮುಂದೆ ಸಾಗುತ್ತಿದ್ದರು. ನನ್ನ ಹೆಸರು ವಿಠಲ್ ರಾವ್, ನಾನು ರೈಲ್ವೆ ಇಲಾಖೆಯಲ್ಲಿ ಈ ಹಿಂದೆ ಡ್ರೈವರ್ ಆಗಿ ಕೆಲಸ ಮಾಡಿದ್ದೆ ಎಂದು ಹೇಳುತ್ತಾ ವಿಚಿತ್ರವಾಗಿ ವರ್ತಿಸುತ್ತಿದ್ದ ಈ ವ್ಯಕ್ತಿ.
ಇನ್ನೊಂದೆಡೆ ಟೌನ್ ಹಾಲ್ ವೃತ್ತದ ನಾಲ್ಕು ದಿಕ್ಕುಗಳಲ್ಲಿ ಸಿಸಿಟಿವಿಗಳಿದ್ದರೂ ಈತನ ಮಂಗನಾಟವನ್ನು ಕಂಟ್ರೋಲ್ ರೂಂನಲ್ಲಿದ್ದ ಪೊಲೀಸ್ ಸಿಬ್ಬಂದಿ ಗಮನಿಸದಿರುವುದು ಅಚ್ಚರಿ ಮೂಡಿಸಿತ್ತು.