ತುಮಕೂರು: ಮಹಾತ್ಮ ಗಾಂಧಿಯವರನ್ನು ಕೊಂದ ಗೋಡ್ಸೆಯನ್ನು ವಿಜೃಂಭಿಸುವ ರೀತಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಸಂಸದ ನಳೀನ್ ಕುಮಾರ್ ಕಟೀಲ್ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಆಗ್ರಹಿಸಿ ವಕೀಲ ರಮೇಶ್ ನಾಯಕ್ ತುಮಕೂರಿನ ಜೆಎಂಎಫ್ಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಗೋಡ್ಸೆ ಪರ ಟ್ವೀಟ್: ಕಟೀಲ್ ವಿರುದ್ಧ ಎಫ್ಐಆರ್ ದಾಖಲಿಸಲು ಮನವಿ - undefined
ಗೋಡ್ಸೆಯನ್ನು ವಿಜೃಂಭಿಸುವ ರೀತಿಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಸಂಸದ ನಳೀನ್ ಕುಮಾರ್ ಕಟೀಲ್ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಆಗ್ರಹಿಸಿ ವಕೀಲ ರಮೇಶ್ ನಾಯಕ್ ತುಮಕೂರಿನ ಜೆಎಂಎಫ್ಸಿ ನ್ಯಾಯಾಲಯದದಲ್ಲಿ ಅರ್ಜಿ ಸಲ್ಲಿಸಿದ್ದಾರೆ
ಮಾಧ್ಯಮದಲ್ಲಿ ಬಂದಂತಹ ಸುದ್ದಿಯನ್ನೇ ಸಾಕ್ಷ್ಯಾಧಾರವಾಗಿ ಆಧರಿಸಿ ಕಟೀಲ್ ವಿರುದ್ಧ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲು ನಿದೇರ್ಶನ ನೀಡಬೇಕೆಂದು ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ, ಈ ಬಗ್ಗೆ ಕ್ರಿಮಿನಲ್ ವಿಚಾರಣೆ ನಡೆಯಬೇಕೆಂದೂ ಅವರು ಕೋರಿದ್ದಾರೆ.
ರಾಜಕಾರಣಿಗಳು ರಾಜಕೀಯವಾಗಿ ಏನು ಬೇಕಾದ್ರೂ ಮಾಡಿಕೊಳ್ಳಲಿ. ಆದರೆ ಮಹಾತ್ಮರ ವಿರುದ್ಧ ಈ ರೀತಿ ಅವಹೇಳನಕಾರಿ ಹೇಳಿಕೆ ನೀಡಿ, ಜನರ ಭಾವನೆಗಳಿಗೆ ಧಕ್ಕೆ ತರುವುದು ಸರಿಯಲ್ಲ. ಹಿಂಸಾಚಾರಕ್ಕೆ ಇವರು ಪ್ರಚೋದಿಸುತ್ತಿದ್ದಾರೆ. ಇದು ಕ್ರಿಮಿನಲ್ ಪ್ರಕರಣವಾಗಿದೆ. ಹಾಗಾಗಿ ಅರ್ಜಿ ಸಲ್ಲಿಸಿದ್ದೇನೆ ಎಂದು ವಕೀಲ ರಮೇಶ್ ನಾಯಕ್ ತಿಳಿಸಿದರು.