ಕರ್ನಾಟಕ

karnataka

ETV Bharat / city

ತುಮಕೂರು ಪಾಲಿಕೆ ಸದಸ್ಯರು ಹಾಗೂ ಆಯುಕ್ತರ ನಡುವೆ ಮುಸುಕಿನ ಗುದ್ದಾಟ - commissioners news

ತುಮಕೂರು ಮಹಾನಗರ ಪಾಲಿಕೆಯಲ್ಲಿ ಮಹಿಳಾ ಪಾಲಿಕೆ ಸದಸ್ಯರೊಂದಿಗೆ ಅವರ ಗಂಡದಿರು ಹಾಗೂ ಸಂಬಂಧಿಕರು ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆಂಬ ಆರೋಪದ ಹಿನ್ನೆಲೆ ಆಯುಕ್ತರು ಹಾಗೂ ಪಾಲಿಕೆ ಸದಸ್ಯರ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ.

ತುಮಕೂರು ಪಾಲಿಕೆ ಸದಸ್ಯರು ಹಾಗೂ ಆಯುಕ್ತರ ನಡುವೆ ಮುಸುಕಿನ ಗುದ್ದಾಟ

By

Published : Jul 31, 2019, 11:33 PM IST

Updated : Aug 1, 2019, 7:16 AM IST

ತುಮಕೂರು: ತುಮಕೂರು ಮಹಾನಗರ ಪಾಲಿಕೆಯಲ್ಲಿ ಮಹಿಳಾ ಪಾಲಿಕೆ ಸದಸ್ಯರೊಂದಿಗೆ ಅವರ ಗಂಡದಿರು, ಸಂಬಂಧಿಕರು ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಆಯುಕ್ತರು ಹಾಗೂ ಪಾಲಿಕೆ ಸದಸ್ಯರ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ.

ತುಮಕೂರು ಪಾಲಿಕೆ ಸದಸ್ಯರು ಹಾಗೂ ಆಯುಕ್ತರ ನಡುವೆ ಮುಸುಕಿನ ಗುದ್ದಾಟ

ತುಮಕೂರು ನಗರಕ್ಕೆ ನೀರು ಸರಬರಾಜು ಮಾಡುವಂತಹ ಬುಗುಡನಹಳ್ಳಿ ಕೆರೆಯಲ್ಲಿ ಮೀನುಗಾರಿಕೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಕೆರೆಯಿಂದ ನಗರದ ವಿವಿಧ ವಾರ್ಡ್​ಗಳಿಗೆ ಸರಬರಾಜು ಮಾಡುವ ನೀರಿನಲ್ಲಿ ಮಣ್ಣು ಬರುತ್ತಿದೆ ಎಂದು ಪಾಲಿಕೆ ಸದಸ್ಯರು ಮೇಯರ್​ಗೆ ದೂರು ನೀಡಿದ್ದರು. ಹೀಗಾಗಿ ಕೆರೆಯಲ್ಲಿ ಮೀನುಗಾರಿಕೆ ನಡೆಸುತ್ತಿರುವ ಕುರಿತು ಮಾಹಿತಿ ನೀಡುವಂತೆ ಪಾಲಿಕೆ ಮೇಯರ್ ಲಲಿತ ರಮೇಶ್ ಅವರು ಆಯುಕ್ತರಾದ ಬೂಬಾಲನ್ ಅವರಿಗೆ ದೂರವಾಣಿ ಮೂಲಕ ಸೂಚಿಸಿ ಸಭೆಗೆ ಬರುವಂತೆ ಸೂಚಿಸಿದ್ದರು. ಆದರೆ ಆಯುಕ್ತರು ಮಾತ್ರ ಸಭೆಗೆ ಬರಲು ನಿರಾಕರಿಸಿದ್ದಾರೆ.

ಇನ್ನು ಈ ಕುರಿತಂತೆ ಆಯುಕ್ತ ಬೂಬಾಲನ್ ಅವರು, ಪಾಲಿಕೆ ಸದಸ್ಯರು, ಸಂಬಂಧಿಕರು ಅಧಿಕಾರಿಗಳ ಮೇಲೆ ಇನ್ನಿಲ್ಲದಂತೆ ವಿನಾಕಾರಣ ಒತ್ತಡ ಹಾಕುತ್ತಾರೆ. ಸಭೆಗೆ ಬರಲೇಬೇಕು ಎಂದು ಒತ್ತಡ ಹಾಕುತ್ತಾರೆ, ಎಲ್ಲರೂ ಸೇರಿ ನನಗೆ ಸಂಬಂಧವಿಲ್ಲದ ವಿಷಯಗಳ ಕುರಿತು ವಿಚಾರಣೆ ಮಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Last Updated : Aug 1, 2019, 7:16 AM IST

ABOUT THE AUTHOR

...view details