ತುಮಕೂರು:ಆರ್ಟಿಪಿಸಿಆರ್ ಟೆಸ್ಟ್ ಮಾಡಿಸುವಂತೆ ಹೇಳಿದ ಆಶಾ ಕಾರ್ಯಕರ್ತೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾವಚಿತ್ರದ ಜೊತೆ ಅವಾಚ್ಯ ಪದಗಳಿಂದ ನಿಂದಿಸಿರುವ ವಿಡಿಯೋ ಹಾಕಿ ವೈರಲ್ ಮಾಡಿದ್ದ ಹಿನ್ನೆಲೆ ಆಶಾ ಕಾರ್ಯಕರ್ತೆ ರೇಖಾ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತುರುವೇಕೆರೆ ತಾಲೂಕು ರಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೊರೊನಾ ಟೆಸ್ಟ್ ಮಾಡಿಸಲು ಹೇಳಿದ ಆಶಾ ಕಾರ್ಯಕರ್ತೆ ವಿರುದ್ಧ ಅವಹೇಳನಕಾರಿ ಪೋಸ್ಟ್: ದೂರು ದಾಖಲು - Ranganahalli Asha activist attempts suicide
ಬೆಂಗಳೂರಿನಿಂದ ಭೂಮಿಕಾ, ಬಿಂದು, ಚಂದ್ರಕಲಾ ಎಂಬ ಮೂವರು ಮಹಿಳೆಯವರು ರಂಗನಹಳ್ಳಿ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಸರ್ಕಾರದ ನಿಯಮದಂತೆ ಆಶಾ ಕಾರ್ಯಕರ್ತೆ ರೇಖಾ ಎಂಬುವರು ಆರ್ಟಿಪಿಸಿಆರ್ ಟೆಸ್ಟ್ ಮಾಡಿಸುವಂತೆ ತಿಳಿಸಿದ್ದಾರೆ. ಇದಕ್ಕೆ ಇಬ್ಬರು ಮಹಿಳೆಯರು ನಿರಾಕರಿಸಿದ್ದಾರೆ. ಅಲ್ಲದೆ ಗ್ರಾಮದಲ್ಲಿ ಇದ್ದಷ್ಟು ದಿನ ರೇಖಾ ಅವರನ್ನು ಹೀನಾಯವಾಗಿ ನಿಂದಿಸಿದ್ದಾರೆ ಎಂದು ಹೇಳಲಾಗ್ತಿದೆ.
ಆಕ್ಸಿಜನ್ ಹಾಕಿಕೊಂಡಿದ್ದ ವ್ಯಕ್ತಿಯ ಜೊತೆ ಬೆಂಗಳೂರಿನಿಂದ ಭೂಮಿಕಾ, ಬಿಂದು, ಚಂದ್ರಕಲಾ ಎಂಬ ಮೂವರು ಮಹಿಳೆಯವರು ರಂಗನಹಳ್ಳಿ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಸರ್ಕಾರದ ನಿಯಮದಂತೆ ಆಶಾ ಕಾರ್ಯಕರ್ತೆ ರೇಖಾ ಎಂಬುವರು ಆರ್ಟಿಪಿಸಿಆರ್ ಟೆಸ್ಟ್ ಮಾಡಿಸುವಂತೆ ತಿಳಿಸಿದ್ದಾರೆ. ಇದಕ್ಕೆ ಇಬ್ಬರು ಮಹಿಳೆಯರು ನಿರಾಕರಿಸಿದ್ದಾರೆ. ಅಲ್ಲದೆ ಗ್ರಾಮದಲ್ಲಿ ಇದ್ದಷ್ಟು ದಿನ ರೇಖಾ ಅವರನ್ನು ಹೀನಾಯವಾಗಿ ನಿಂದಿಸಿದ್ದಾರೆ ಎಂದು ಹೇಳಲಾಗಿದೆ.
ಮರಳಿ ಬೆಂಗಳೂರಿಗೆ ಹೋಗಿದ್ದ ಮಹಿಳೆಯರು ರೇಖಾ ಅವರ ವಿರುದ್ಧ ಕೆಟ್ಟದಾದ ವಿಡಿಯೋ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಸ್ನೇಹಿತೆಯ ಮೂಲಕ ವಿಚಾರ ತಿಳಿದ ರೇಖಾ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದರು. ನಂತರ ಹಿರಿಯ ಆಶಾ ಕಾರ್ಯಕರ್ತೆಯರು ಮತ್ತು ತಹಶೀಲ್ದಾರ್ ಅವರು ಸಮಾಧಾನ ಪಡಿಸಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನಿಡಿದ್ದಾರೆ.