ತುಮಕೂರು: ಜಿಲ್ಲೆಯ ಪಾವಗಡ ಪಟ್ಟಣದಲ್ಲಿ 93 ವರ್ಷದ ವೃದ್ಧೆಯೊಬ್ಬರು ಉತ್ಸಾಹದಿಂದ ಬಂದು ಕೋವಿಡ್ ವ್ಯಾಕ್ಸಿನ್ ಪಡೆದು ಗಮನ ಸೆಳೆದರು.
ಪಟ್ಟಣದ 23ನೇ ವಾರ್ಡ್ನ ಕನುಮಲ ಚೆರುವು ಬಡಾವಣೆ ಜನರಿಗೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಆಶಾ ಕಾರ್ಯಕರ್ತೆಯರು ಹಾಗೂ ವೈದ್ಯಕೀಯ ಸಿಬ್ಬಂದಿ ಅರಿವು ಮೂಡಿಸಿದ್ದರು. ವ್ಯಾಕ್ಸಿನ್ ನೀಡುತ್ತಿರುವ ಬಗ್ಗೆ ತಿಳಿದ 93 ವರ್ಷದ ಬೀಬಿಜಾನ್ ಸ್ವಯಂಪ್ರೇರಿತರಾಗಿ ಬಂದು ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ.