ತುಮಕೂರು: ಜಿಲ್ಲೆಯಲ್ಲಿ ಇಂದು ಒಂದೇ ದಿನ 76 ಮಂದಿ ಸೋಂಕಿತರು ಡಿಸ್ಚಾರ್ಜ್ ಆಗಿದ್ದು, ಈವರೆಗೂ ದಾಖಲಾದ ಒಟ್ಟು 1,988 ಸೋಂಕಿತರ ಪೈಕಿ 1,047 ಮಂದಿ ಚೇತರಿಸಿಕೊಂಡಿದ್ದಾರೆ. 883 ಸಕ್ರಿಯ ಪ್ರಕರಣಗಳು ಇವೆ.
ತುಮಕೂರು: 72 ಮಂದಿಗೆ ಕೊರೊನಾ, 76 ಸೋಂಕಿತರು ಗುಣಮುಖ - ತುಮಕೂರು ಜಿಲ್ಲಾ ಸುದ್ದಿ
ತುಮಕೂರು ಜಿಲ್ಲೆಯಲ್ಲಿ 72 ಮಂದಿಗೆ ಕೊರೊನಾ ವೈರಸ್ ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 1,988ಕ್ಕೆ ತಲುಪಿದೆ.
![ತುಮಕೂರು: 72 ಮಂದಿಗೆ ಕೊರೊನಾ, 76 ಸೋಂಕಿತರು ಗುಣಮುಖ Covid-19 Hospital](https://etvbharatimages.akamaized.net/etvbharat/prod-images/768-512-8281544-533-8281544-1596464405490.jpg)
ಕೋವಿಡ್-19 ಆಸ್ಪತ್ರೆ
ಇನ್ನೊಂದೆಡೆ 72 ಮಂದಿಗೆ ಸೋಂಕು ತಗುಲಿದೆ. ಅದರಲ್ಲಿ ತುಮಕೂರು ತಾಲೂಕಿನಲ್ಲಿ 28, ಕುಣಿಗಲ್ 12, ಕೊರಟಗೆರೆ 7, ತುರುವೇಕೆರೆ ಮತ್ತು ಮಧುಗಿರಿಯಲ್ಲಿ ತಲಾ ಐವರಿಗೆ, ಚಿಕ್ಕನಾಯಕನಹಳ್ಳಿ ಮತ್ತು ಗುಬ್ಬಿಯಲ್ಲಿ ತಲಾ ನಾಲ್ವರಿಗೆ, ಪಾವಗಡ ಮತ್ತು ಶಿರಾದಲ್ಲಿ ತಲಾ ಇಬ್ಬರಿಗೆ, ತಿಪಟೂರು ತಾಲೂಕಿನಲ್ಲಿ ಮೂವರಿಗೆ ಸೋಂಕು ದೃಢಪಟ್ಟಿದೆ.
ಯಾವುದೇ ಗುಣಲಕ್ಷಣಗಳು ಇಲ್ಲದ ಕ್ವಾರಂಟೈನ್ನಲ್ಲಿದ್ದ 48 ಮಂದಿಯಲ್ಲಿಯೂ ಸೋಂಕು ಕಂಡು ಬಂದಿದೆ. 7 ಮಂದಿ ಪ್ರಾಥಮಿಕ ಸಂಪರ್ಕಿತರು, ನಾಲ್ವರು ದ್ವಿತೀಯ ಸಂಪರ್ಕಿತರು, ಓರ್ವ ಬಾಣಂತಿ ಸೋಂಕು ತಗುಲಿದೆ. ಇಂದು ಒಂದು ಸಾವು ವರದಿಯಾಗಿದೆ.