ತುಮಕೂರು: ಕೊರಟಗೆರೆ ತಾಲೂಕು ತುಂಬಾಡಿ ಟೋಲ್ ಪ್ಲಾಜಾ ಸಮೀಪದ ಪೆಟ್ಟಿಗೆ ಅಂಗಡಿ ಮುಂಭಾಗ ನಿಂತಿದ್ದ ದ್ವಿಚಕ್ರ ವಾಹನದ ಮೇಲೆ ಕೊರಟಗೆರೆ ಅಬಕಾರಿ ನಿರೀಕ್ಷಕಿ ಶ್ರೀಲತಾ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿದೆ. ಇಬ್ಬರು ಆರೋಪಿಗಳಿಂದ 70 ಸಾವಿರ ರೂ. ಮೌಲ್ಯದ 600ಗ್ರಾಂ ಗಾಂಜಾ ವಶಕ್ಕೆ ತೆಗೆದುಕೊಂಡಿದ್ದಾರೆ.
ದಾಳಿ ನಡೆಸಿದಾಗ ಸುಮಾರು 70ಸಾವಿರ ಮೌಲ್ಯದ 600ಗ್ರಾಂನಷ್ಟು ಸೊಪ್ಪು, ಹೂವು, ಬೀಜ ಹಾಗೂ ತೆನೆ ಮಿಶ್ರಿತ ಒಣ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಮಧುಗಿರಿ ತಾಲೂಕು ಕಾಟಗಾನಹಟ್ಟಿಯ ಶಿವಣ್ಣ ಮತ್ತು ಕೊರಟಗೆರೆ ತಾಲೂಕು ವೀರನಗರ ವಾಸಿಯಾದ ಯಲ್ಲಪ್ಪ ಬಂಧಿತ ಆರೋಪಿಗಳು.