ಶಿವಮೊಗ್ಗ: ಯಡಿಯೂರಪ್ಪ ಹಾಗೂ ಶೋಭಾ ಅವರು ಯಾವಾಗ್ಲೂ ಕೇರಳದಲ್ಲಿಯೇ ಹೋಮ, ಪೂಜೆ ಮಾಡಿಸುತ್ತಿರುತ್ತಾರೆ. ಇದರಿಂದ ನನಗೆ ಅವರೇ ವಾಮಾಚಾರ ಮಾಡಿಸಿರಬೇಕು ಎಂದು ಬೇಳೂರು ಗೋಪಾಲಕೃಷ್ಣ ಶಂಕೆ ವ್ಯಕ್ತಪಡಿಸಿದ್ದಾರೆ.
ಬಿಎಸ್ವೈ, ಶೋಭಾ ವಾಮಾಚಾರ ಮಾಡಿಸಿದ್ದರಿಂದ 3 ತಿಂಗಳು ಮಂಕಾಗಿದ್ದೆ: ಗೋಪಾಲಕೃಷ್ಣ - kannada news
ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಇಬ್ಬರೂ ಸೇರಿ ನನಗೆ ವಾಮಾಚಾರ ಮಾಡಿಸಿದ್ದಿರಬೇಕು. ಇದರಿಂದ ಮೂರು ತಿಂಗಳು ಕಾಲ ಮಂಕಾಗಿದ್ದೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ.
ಸಾಗರದಲ್ಲಿ ನನಗೆ ಟಿಕೆಟ್ ತಪ್ಪಲು ಹಾಲಿ ಸಂಸದ ರಾಘವೇಂದ್ರ, ವಿಜಯೇಂದ್ರ ಅವರ ಸಿಡಿ ಹಾಲಪ್ಪ ಬಳಿ ಇರುವುದೇ ಕಾರಣ ಎಂದು ಹೇಳಿದ್ದೆ. ಸಾಗರದಲ್ಲಿ ವಿಜಯೇಂದ್ರ ಅವರ ಸಮೀಕ್ಷೆಯಲ್ಲಿ ಹಾಲಪ್ಪ ಹೆಸರು ಇಲ್ಲದೆ ಹೋದ್ರು ಸಹ ಕೊನೆಯಲ್ಲಿ ಅವರಿಗೆ ಟಿಕೆಟ್ ನೀಡಬೇಕಾಯ್ತು ಎಂದು ಬೇಳೂರು ದೂರಿದರು.
ಈ ಬಾರಿ ಎರಡು ಪಕ್ಷಗಳ ಮುಖಂಡರು ಒಟ್ಟಾಗಿ ಮಧು ಬಂಗಾರಪ್ಪ ಅವರನ್ನು ಗೆಲ್ಲಿಸುತ್ತೇವೆ. ಬಿಜೆಪಿಯಲ್ಲಿಯೇ ರಾಘವೇಂದ್ರ ಬಗ್ಗೆ ನಿರಾಸಕ್ತಿ ಇದೆ. ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಗೌಡರು ತಮ್ಮವರಿಗೇ ಮಾತ್ರ ಟಿಕೆಟ್ ನೀಡಿದ್ದಾರೆ ಎಂದು ಬೇಳೂರು ಗೋಪಾಲಕೃಷ್ಣ ವಾಗ್ದಾಳಿ ನಡೆಸಿದರು.