ಕರ್ನಾಟಕ

karnataka

ETV Bharat / city

ಆರ್ಯುವೇದ ವಿವಿಯು DRDO ಕೇಂದ್ರಕ್ಕೆ ಸಹಕಾರಿಯಾಗಿ ಕಾರ್ಯನಿರ್ವಹಿಸಬೇಕು: ಸಂಸದ ಬಿ.ವೈ.ರಾಘವೇಂದ್ರ - World Ayurveda Day celebration in Shivamogga

ಶಿವಮೊಗ್ಗದ ಆರ್ಯುವೇದ ಕಾಲೇಜಿನಲ್ಲಿ ನಡೆದ ವಿಶ್ವ ಆರ್ಯುವೇದ ದಿನಾಚರಣೆ ಹಾಗೂ ವಿಶ್ವ ಧನ್ವಂತರಿ ದಿನಾಚರಣೆ ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಆರ್ಯುವೇದಕ್ಕೆ ಐತಿಹಾಸಿಕವಾದ ಇತಿಹಾಸವಿದೆ. ಶಿವಮೊಗ್ಗದ ಆರ್ಯುವೇದ ವಿಶ್ವ ವಿದ್ಯಾನಿಲಯವು ರಕ್ಷಣಾ ಇಲಾಖೆ ವತಿಯಿಂದ ಸ್ಥಾಪಿತವಾಗುವ ಡಿಆರ್​ಡಿಒ ಕೇಂದ್ರಕ್ಕೆ ಸಹಕಾರಿಯಾಗಿರಬೇಕು..

ಸಂಸದ ಬಿ.ವೈ.ರಾಘವೇಂದ್ರ
ಸಂಸದ ಬಿ.ವೈ.ರಾಘವೇಂದ್ರ

By

Published : Nov 3, 2021, 9:31 AM IST

ಶಿವಮೊಗ್ಗ :ಶಿವಮೊಗ್ಗದ ಆರ್ಯುವೇದ ವಿಶ್ವ ವಿದ್ಯಾನಿಲಯವು ರಕ್ಷಣಾ ಇಲಾಖೆ ವತಿಯಿಂದ ಸ್ಥಾಪಿತವಾಗುವ ಡಿಆರ್​ಡಿಒ ಕೇಂದ್ರಕ್ಕೆ ಸಹಕಾರಿಯಾಗಿರಬೇಕೆಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.

ಶಿವಮೊಗ್ಗದ ಆರ್ಯುವೇದ ಕಾಲೇಜಿನಲ್ಲಿ ನಡೆದ ವಿಶ್ವ ಆರ್ಯುವೇದ ದಿನಾಚರಣೆ ಹಾಗೂ ವಿಶ್ವ ಧನ್ವಂತರಿ ದಿನಾಚರಣೆ ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿದ ಅವರು, ಆರ್ಯುವೇದಕ್ಕೆ ಐತಿಹಾಸಿಕವಾದ ಇತಿಹಾಸವಿದೆ. ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ರಕ್ಷಣಾ ಇಲಾಖೆಯ ಡಿಆರ್​ಡಿಒ ಕೇಂದ್ರ ತೆರೆಯಲು ಸರ್ವ ಪ್ರಯತ್ನ ಮಾಡಲಾಗುತ್ತಿದೆ. ಈ ಕೇಂದ್ರದಲ್ಲಿ ಪಶ್ಚಿಮ ಘಟ್ಟದಲ್ಲಿ ಸಿಗುವ ಅಮೂಲ್ಯವಾದ ಆರ್ಯುವೇದದ ಸಸ್ಯಗಳಿಂದ ಔಷಧ ತಯಾರಿಸಿ, ಯುದ್ಧದ ಸಮಯದಲ್ಲಿ ಸೈನಿಕರಿಗೆ ಸಹಾಯಕವಾಗುವಂತಹ ಔಷಧಿ ತಯಾರಿಸಬೇಕಿದೆ.

ಇದು ಒಳ್ಳೆಯ ಅವಕಾಶ. ಈ ಅವಕಾಶವನ್ನು ಬಳಸಿಕೊಂಡು ಸೈನಿಕರಿಗ ಸಹಾಯ ಮಾಡಬೇಕು ಎಂದರು. ಇನ್ನೂ ಸಚಿವ ಈಶ್ವರಪ್ಪ, ಶಂಕರಮೂರ್ತಿ Dವರು ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರ ಸಹಕಾರದಿಂದ ಶಿವಮೊಗ್ಗಕ್ಕೆ ಆರ್ಯುವೇದ ವಿಶ್ವವಿದ್ಯಾನಿಲಯ ಮಂಜೂರು ಆಗಿದೆ. ರಾಜ್ಯದ 105 ಆರ್ಯುವೇದ ಕಾಲೇಜಿಗೆ ಇದು ಒಂದು ವಿಶ್ವವಿದ್ಯಾನಿಲಯವಾಗಿದೆ. ಸದ್ಯ ಇದು ರಾಜೀವ್ ಗಾಂಧಿ ವಿವಿಯಿಂದ ಬೇರ್ಪಡಿಸುವ ಪ್ರಕ್ರಿಯೆ ನಡೆದಿದೆ ಎಂದರು.‌

ಪಶ್ಚಿಮ ಘಟ್ಟದಲ್ಲಿನ ಆರ್ಯುವೇದ ಔಷಧ ಲಭ್ಯವಿದೆ. ವಿವಿಯ ವಿದ್ಯಾರ್ಥಿಗಳು ಕ್ಷೇತ್ರದ ಪ್ರವಾಸಕೈಗೊಂಡು ದೇಶ ಸೇವೆ ಮಾಡಬೇಕಿದೆ ಎಂದರು. ನಮ್ಮ ಪ್ರಕೃತಿಯಲ್ಲಿ ಸಿಗುವ ಔಷಧ ಆರ್ಯುವೇದವಾಗಿದೆ ಎಂದರು. ಈ ವೇಳೆ ಸೂಡಾ ಅಧ್ಯಕ್ಷ ಜ್ಯೋತಿ ಪ್ರಕಾಶ್, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಹಾಗೂ ಕಾಲೇಜಿನ ಸಿಬ್ಬಂದಿ ಹಾಜರಿದ್ದರು.

ABOUT THE AUTHOR

...view details