ಕರ್ನಾಟಕ

karnataka

ETV Bharat / city

ಭದ್ರಾವತಿ : ಕಾರ್ಖಾನೆಯ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಸಾವು - ಭದ್ರಾವತಿಯಲ್ಲಿ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಸಾವು

ಯಂತ್ರಕ್ಕೆ ಸಿಲುಕಿ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಭದ್ರಾವತಿಯಲ್ಲಿ ನಡೆದಿದೆ..

shivamogga
ಶಿವಮೊಗ್ಗ

By

Published : May 28, 2022, 12:41 PM IST

ಶಿವಮೊಗ್ಗ :ಕಾರ್ಖಾನೆಯಲ್ಲಿ‌ ಕೆಲಸ ಮಾಡುವ ವೇಳೆ ಯಂತ್ರಕ್ಕೆ ಸಿಲುಕಿ ಕಾರ್ಮಿಕನೋರ್ವ ಮೃತಪಟ್ಟ ಘಟನೆ ನಿನ್ನೆ(ಶುಕ್ರವಾರ) ರಾತ್ರಿ ಭದ್ರಾವತಿಯಲ್ಲಿ ನಡೆದಿದೆ. ನಗರದ ಲೋಹರ್ ಹುತ್ತಾ ದನದ ಮೇವು ತಯಾರಿಸುವ ಆರ್‌ಎಎಸ್ ಫಾರ್ಮಾಸಿಟಿಕಲ್​​ನ ಕಾರ್ಮಿಕ ಸೆಂಥಿಲ್ ಕುಮಾರ್(35) ಎಂಬುವರು ಮೃತ ದುರ್ದೈವಿ.

ನಿನ್ನೆ ರಾತ್ರಿ ಪಾಳೆಯಲ್ಲಿ ಕೆಲಸ ಮಾಡುವ ವೇಳೆ ಸೆಂಥಿಲ್ ಯಂತ್ರಕ್ಕೆ ಸಿಲುಕಿದ್ದಾರೆ. ಈ ವೇಳೆ ಅವರ ಹೊಟ್ಟೆ ಭಾಗಕ್ಕೆ ತೀವ್ರತರವಾದ ಗಾಯವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ರವಾನೆ ಮಾಡುವಾಗ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಕಾರ್ಮಿಕಸೆಂಥಿಲ್‌ಕುಮಾರ್

ಕಾರ್ಮಿಕರಿಗಿಲ್ಲ ಸೂಕ್ತ ಸುರಕ್ಷತೆ, ಭದ್ರತೆ :ಭದ್ರಾವತಿ ಆರ್‌ಎಎಸ್ ಕಾರ್ಖಾನೆಯಲ್ಲಿ ಕಾರ್ಮಿಕರಿಗೆ ಯಾವುದೇ ಸುರಕ್ಷತಾ ಸಲಕರಣೆಗಳು ಇಲ್ಲ. ಅಲ್ಲದೇ ಪಿಎಫ್ ಮತ್ತು ಇಎಸ್ಐ ಸಹ ಮಾಲೀಕರು ಒದಗಿಸುತ್ತಿರಲಿಲ್ಲ ಎಂಬ ಆರೋಪವಿದೆ. ಆದರೆ, ಕಾರ್ಮಿಕ ಸಂಘಟನೆಗಳು ಮಾತ್ರ ಸುಮ್ಮನೆ ಇರುವುದು ಕಾರ್ಮಿಕರ ದುರಂತವಾಗಿದೆ.

ABOUT THE AUTHOR

...view details