ಶಿವಮೊಗ್ಗ: ಸೋಗಾನೆಯಲ್ಲಿ ನಡೆಯುತ್ತಿರುವ ವಿಮಾನ ನಿಲ್ದಾಣದ ಕಾಮಗಾರಿಯ ಸಂದರ್ಭ ಅವಘಡ ನಡೆದಿದ್ದು, ಓರ್ವ ಕಾರ್ಮಿಕ ಸಾವಿಗೀಡಾಗಿದ್ದಾನೆ. ಮೃತನನ್ನು ಹಾವೇರಿ ಜಿಲ್ಲೆಯ ಮಲ್ಲಿಕಾರ್ಜುನ್ ಹರಿಜನ ಎಂದು ಗುರುತಿಸಲಾಗಿದೆ. ನೆಲ ಸಮತಟ್ಟು ಮಾಡುವ ಸಣ್ಣ ರೋಲರ್ ಕಾರ್ಮಿಕನ ಮೈಮೇಲೆ ಹರಿದು ದುರ್ಘಟನೆ ಘಟಿಸಿದೆ.
ಶಿವಮೊಗ್ಗ ಏರ್ಪೋರ್ಟ್ ಕಾಮಗಾರಿ ವೇಳೆ ರೋಲರ್ ಹರಿದು ಕಾರ್ಮಿಕ ಸಾವು - ಶಿವಮೊಗ್ಗದ ಸೋಗಾನೆ
ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಸಂದರ್ಭದಲ್ಲಿ ರೋಡ್ ರೋಲರ್ ಹರಿದು ಕಾರ್ಮಿಕನೋರ್ವ ಸಾವನ್ನಪ್ಪಿದ್ದಾನೆ.
ಶಿವಮೊಗ್ಗ
ಸಣ್ಣ ರೋಲರ್ ನಡೆಸುತ್ತಿದ್ದ ಬಿಹಾರ ಮೂಲದ ಕಾರ್ಮಿಕನ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎನ್ನಲಾಗಿದೆ. ಮಲ್ಲಿಕಾರ್ಜುನ್ ತಂದೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ:ಭದ್ರಾವತಿ : ಕಾರ್ಖಾನೆಯ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಸಾವು