ಶಿವಮೊಗ್ಗ:ಅಡುಗೆ ಮಾಡುವಾಗ ಹಾವು ಕಚ್ಚಿ ಮಹಿಳೆ ಸಾವನ್ನಪ್ಪಿರುವ ಘಟನೆ ಹೊಸನಗರದ ಮೇಲಿಗೆಬೆಸಿಗೆ ಗ್ರಾಮದಲ್ಲಿ ನಡೆದಿದೆ. ಸೌಮ್ಯ (24) ಸಾವನ್ನಪ್ಪಿದ ಮಹಿಳೆ. ಅಡುಗೆ ಮನೆಗೆ ಹೋದಾಗ ಕಾಲಿಗೆ ವಿಷಕಾರಿ ಹಾವು ಕಚ್ಚಿತ್ತು.
ಶಿವಮೊಗ್ಗ: ಅಡುಗೆ ಮನೆಯಲ್ಲಿ ಹಾವು ಕಚ್ಚಿ ಮಹಿಳೆ ಸಾವು - ಅಡುಗೆ ಮನೆಯಲ್ಲಿ ಹಾವು ಕಚ್ಚಿ ಮಹಿಳೆ ಸಾವು
ಅಡುಗೆ ಮಾಡುತ್ತಿರುವಾಗ ಹಾವು ಕಚ್ಚಿರುವುದು ಗಮನಕ್ಕೆ ಬರಲಿಲ್ಲ. ಹೀಗಾಗಿ, ತಡವಾಗಿ ಆಸ್ಪತ್ರೆಗೆ ತೆರಳಿದ್ದು ಬದುಕಿಗೆ ಎರವಾಗಿದೆ.
ಹಾವು ಕಚ್ಚಿ ಸಾವನ್ನಪ್ಪಿದ ಸೌಮ್ಯಾ
ಸ್ವಲ್ಪ ಸಮಯದ ಬಳಿಕ ಕಾಲಿನಲ್ಲಿ ಊತ ಕಾಣಿಸಿಕೊಂಡು ತೀವ್ರ ನೋವು ಉಂಟಾಗಿದೆ. ಹಾವು ಕಚ್ಚಿರುವ ಬಗ್ಗೆ ಅನುಮಾನಗೊಂಡು ಹೊಸನಗರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದರು.
ಸೌಮ್ಯ ನಾಲ್ಕು ವರ್ಷದ ಹಿಂದೆ ನಾಗರಾಜ್ ಎಂಬುವರ ಜೊತೆ ಪ್ರೇಮ ವಿವಾಹವಾಗಿದ್ದರು. ಮೃತರಿಗೆ ಮೂರು ವರ್ಷದ ಗಂಡು ಮಗನಿದ್ದಾನೆ. ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.