ಶಿವಮೊಗ್ಗ: ಪಶು ಆಹಾರ ಮಂಜೂರು ಮಾಡಲು ಸರ್ಕಾರಿ ಪಶು ವೈದ್ಯಾಧಿಕಾರಿ ಲಂಚ ಪಡೆದಿರುವ ವಿಡಿಯೋ ಈ ಟಿವಿ ಭಾರತಕ್ಕೆ ಲಭ್ಯವಾಗಿದೆ.
ಶಿಕಾರಿಪುರ ತಾಲೂಕಿನ ಸಾಲೂರು ಗ್ರಾಮದ ಪಶು ವೈದ್ಯಾಧಿಕಾರಿ ಕುಮಾರನಾಯ್ಕ ಎಂಬವರು ಲಂಚ ಪಡೆಯುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಆಗಿದ್ದೇನು?
ಹೈನುಗಾರಿಕೆ ಯೋಜನೆಯಡಿ ಪಶು ಆಹಾರ ಮಂಜೂರು ಮಾಡಲು ಕುಮಾರನಾಯ್ಕ ಲಂಚ ಬೇಡಿಕೆ ಇಟ್ಟಿದ್ದರು. ಮಂಜೂರಾತಿಗೆ ತಾನು ಸಹಿ ಮಾಡಲು 1.500 ರೂ ನೀಡಬೇಕೆಂದು ಕೇಳಿದ್ದರು ಎನ್ನಲಾಗಿದೆ.
ಆದರೆ ಫಲಾನುಭವಿ ಕಡಿಮೆ ಹಣ ನೀಡಲು ಹೋದಾಗ, ನೀನು ಕಳೆದ ಸಲ ಕಡಿಮೆ ನೀಡಿದ್ದೀಯಾ. ಈ ಬಾರಿಕ್ಕಿಂತ 1.500 ರೂಗಿಂತ ಕಡಿಮೆ ನೀಡದರೆ ನಾನು ಸಹಿ ಹಾಕುವುದಿಲ್ಲ ಎಂದು ಹೇಳುತ್ತಿರುವುದು ವಿಡಿಯೋದಲ್ಲಿದೆ.
ಹೀಗೆಯೆ ಹಣ ನೀಡಿದ್ರೆ ಮಾತ್ರ ಸ್ಥಳದಲ್ಲೇ ಸೀಲು, ಸಹಿ ಹಾಕಿ, ಆರ್ಡರ್ ಕಾಪಿ ನೀಡುತ್ತಾರೆ. ಸಾಲೂರು ಆಸ್ಪತ್ರೆಗೆ ಹಾಗೂ ರೈತರಿಗೆ ಪಶು ಇಲಾಖೆಯಿಂದ ನೀಡಲಾಗುವ ಎಲ್ಲಾ ಯೋಜನೆಗಳಿಗೂ ಹಣ ಪಡೆಯಲಾಗುತ್ತಿದೆ ಎಂದು ಆರೋಪಿಸಾಗಿದೆ.
ಈ ಬಗ್ಗೆ ವೈದ್ಯ ಕುಮಾರನಾಯ್ಕರನ್ನು ಈ ಟಿವಿ ಭಾರತ ಸಂಪರ್ಕಿಸಿದಾಗ, ನಾನು ಸಾಲ ಕೊಟ್ಟಿದ್ದೆ, ಅದೇ ಹಣ ಪಡೆದಿದ್ದೆನೆ ಎಂದು ಸಮಾಜಾಯಿಸಿ ನೀಡಿದ್ದಾರೆ.
ಆದರೆ ಜಿಲ್ಲಾ ಪಶುಸಂಗೋಪನ ನಿರ್ದೇಶಕರು ಈ ವೈದ್ಯಾಧಿಕಾರಿ ಮೇಲೆ ಕ್ರಮ ಕೈಗೊಂಡು, ಅಮಾನತು ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.