ಶಿವಮೊಗ್ಗ:ಆಗಸ್ಟ್ ನಲ್ಲಿಉಂಟಾಗಿದ್ದ ಪ್ರವಾಹ ಸಾಕಷ್ಟು ಹಾನಿ ಮಾಡಿತ್ತು. ಇದರಿಂದ ಹಲವಾರು ಜನ ತಮ್ಮ ಮನೆ ವಸ್ತುಗಳನ್ನು ಕಳೆದುಕೊಂಡಿದ್ದರು. ಈ ಹಿನ್ನಲೆಯಲ್ಲಿ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘವು ಪ್ರವಾಹದಿಂದ ತೂಂದರೆಗೆ ಒಳಗಾಗಿದ್ದ ವೀರಶೈವ ಸಮಾಜದವರನ್ನು ಗುರುತಿಸಿ ಅವರಿಗೆ ಪರಿಹಾರದ ರೂಪದಲ್ಲಿ 10 ಸಾವಿರ ರೂ. ಚೆಕ್ ವಿತರಿಸಿದೆ.
ತುಂಗಾ ನದಿ ಪ್ರವಾಹದಿಂದ ನಗರದ ಕುಂಬಾರ ಗುಂಡಿ, ಸೀಗೆಹಟ್ಟಿ, ವಂದನಾ ಟಾಕೀಸ್ ಹಾಗೂ ಗುಂಡಪ್ಪ ಶೆಡ್ ಹೀಗೆ ಸಾಕಷ್ಟು ಕಡೆ ಮನೆಗಳಿಗೆ ನೀರು ನುಗ್ಗಿತ್ತು. ಇದರಿಂದ ಮನೆಯ ದಿನ ಬಳಕೆಯ ವಸ್ತುಗಳು ನೀರಿನಲ್ಲಿ ಮುಳುಗಿ ಮಕ್ಕಳು ಪಠ್ಯ ಪುಸ್ತಕಗಳನ್ನು ಕಳೆದುಕೊಂಡಿದ್ದರು. ಇದರಿಂದ ಬಸವೇಶ್ವರ ವೀರಶೈವ ಸೇವಾ ಸಂಘದಿಂದ ತಮ್ಮ ಸಮಾಜದವರ ಮನೆಗಳಿಗೆ ಭೇಟಿ ನೀಡಿ ಅವರಿಗೆಲ್ಲ ಅಂದೇ ಬೇಕಾದ ವಸ್ತುಗಳನ್ನು ಖರೀದಿಸಿ, ಕೊಡಲಾಗಿತ್ತು.
ನೆರೆ ಸಂತ್ರಸ್ತರಿಗೆ ಪರಿಹಾರ ಚೆಕ್ ನೀಡಿದ ವೀರಶೈವ ಸಮಾಜ ಸಂಘ - ಪ್ರದಾನ ಕಾರ್ಯದರ್ಶಿ ಜಗದೀಶ್ ಹಾಗೂ ಜ್ಯೋತಿ ಪ್ರಕಾಶ್
ಆಗಸ್ಟ್ನಲ್ಲಿ ಉಂಟಾದ ಪ್ರವಾಹ ಸಾಕಷ್ಟು ಹಾನಿ ಮಾಡಿತ್ತು. ಇದರಿಂದ ಹಲವಾರು ಜನ ತಮ್ಮ ಮನೆಯ ವಸ್ತುಗಳನ್ನು ಕಳೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘವು ಪ್ರವಾಹದಿಂದ ತೂಂದರೆಗೆ ಒಳಗಾಗಿದ್ದ ವೀರಶೈವ ಸಮಾಜದವರನ್ನು ಗುರುತಿಸಿ ಅವರಿಗೆ ಪರಿಹಾರದ ರೂಪದಲ್ಲಿ 10 ಸಾವಿರ ರೂ. ಚೆಕ್ ವಿತರಿಸಿದೆ.
ನೆರೆ ಸಂತ್ರಸ್ತರಿಗೆ ಪರಿಹಾರ ಚೆಕ್ ನೀಡಿದ ವೀರಶೈವ ಸಮಾಜ ಸಂಘ
ಇಂದು ಗಾಂಧಿ ಬಜಾರ್ ನ ಬಸವೇಶ್ವರ ದೇವಾಲಯದ ಆವರಣದಲ್ಲಿ ಸೇವಾ ಸಂಘದ ಆಶ್ರಯದಲ್ಲಿ ರಾಜಶೇಖರ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ಈ ವೇಳೆ ಪ್ರಧಾನ ಕಾರ್ಯದರ್ಶಿ ಜಗದೀಶ್ ಹಾಗೂ ಜ್ಯೋತಿ ಪ್ರಕಾಶ್ ಅವರ ನೇತೃತ್ವದಲ್ಲಿ ಪ್ರತಿಯೊಬ್ಬರಿಗೂ ತಲಾ 10 ಸಾವಿರ ರೂಪಾಯಿ ನೀಡಲಾಯಿತು.