ETV Bharat Karnataka

ಕರ್ನಾಟಕ

karnataka

ETV Bharat / city

ಶಿವಮೊಗ್ಗದಲ್ಲಿ ಸಾವಿರಾರು ಮಂದಿಗೆ ಬಾಡೂಟ ಹಾಕಿಸಿದ ಪವರ್ ಸ್ಟಾರ್ ಅಭಿಮಾನಿಗಳು - ಶಿವಮೊಗ್ಗ ವೀರ ಕೇಸರಿ ಯುವಕ ಸಂಘ

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಪುಣ್ಯಸ್ಮರಣೆ ಹಿನ್ನೆಲೆ ಶಿವಮೊಗ್ಗದಲ್ಲಿ ವೀರ ಕೇಸರಿ ಯುವಕ ಸಂಘದವರು ನಿನ್ನೆ ಅನ್ನ ಸಂತರ್ಪಣೆ ಏರ್ಪಡಿಸಿದ್ದರು.

ಬಾಡೂಟ ಹಾಕಿಸಿದ ಪವರ್ ಸ್ಟಾರ್ ಅಭಿಮಾನಿಗಳು
ಬಾಡೂಟ ಹಾಕಿಸಿದ ಪವರ್ ಸ್ಟಾರ್ ಅಭಿಮಾನಿಗಳು
author img

By

Published : Nov 10, 2021, 7:39 AM IST

ಶಿವಮೊಗ್ಗ: ಪುನೀತ್​ ನಿಧನದ ನಂತರ ಅಪಾರ ಅಭಿಮಾನಿಗಳಿಗೆ ನಿನ್ನೆ ದೊಡ್ಮನೆ ಕುಟುಂಬಸ್ಥರು ಅನ್ನ ಸಂತರ್ಪಣೆ ಏರ್ಪಡಿಸಿದ್ದರು. ಅಪ್ಪು ಪುಣ್ಯ ತಿಥಿ ಹಿನ್ನೆಲೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಸಹ ಪುನೀತ್ ಅಭಿಮಾನಿಗಳು ಬಾಡೂಟ ಹಾಕಿಸುವ ಮೂಲಕ ನೆಚ್ಚಿನ ನಟನನ್ನು ಸ್ಮರಿಸಿದರು.

ವೀರ ಕೇಸರಿ ಯುವಕ ಸಂಘದವರು ಸಾರ್ವಜನಿಕರಿಗೆ ಬಾಡೂಟವನ್ನು ಏರ್ಪಡಿಸಿದ್ದರು. ಅನ್ನ ಸಂತರ್ಪಣೆಗೂ ಮೊದಲು ಪುನೀತ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ವಿವಿಧ ಖಾದ್ಯಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು.

ಪುನೀತ್​ ರಾಜ್ ಕುಮಾರ್ ಅವರಿಗೆ ಬಾಡೂಟ ಅಂದ್ರೆ ಬಲು ಇಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಈ ಅನ್ನ ಸಂತರ್ಪಣೆ ಕಾರ್ಯ ಹಮ್ಮಿಕೊಂಡಿದ್ದೇವೆ. ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ, ಊಟ ಸೇವಿಸಿದ್ದಾರೆ ಎಂದು ಸಂಘದ ಸದಸ್ಯರು ತಿಳಿಸಿದರು.

ABOUT THE AUTHOR

author-img

...view details