ಶಿವಮೊಗ್ಗ: ನಗರದ ಹೆಚ್ಪಿಸಿ ಚಿತ್ರಮಂದಿರದಲ್ಲಿ ಆಯೋಜಿಸಿದ್ದ ದಸರಾ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಾಯಕ ವಾಸುಕಿ ವೈಭವ್ ಹಾಡು ಹೇಳುವ ಮೂಲಕ ನೆರೆದಿದ್ದ ಜನರನ್ನು ರಂಜಿಸಿದರು.
ಜಿಲ್ಲೆಯಲ್ಲಿ ಆಯೋಜಿಸಿದ್ದ ದಸರಾ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಾಸುಕಿ, ನಮ್ಮ ತಂದೆ ಇಲ್ಲಿಯವರೇ. ಅಜ್ಜಿಯ ಮನೆ ಇಲ್ಲಿರುವುದರಿಂದ ಶಿವಮೊಗ್ಗಕ್ಕೂ ನನಗೂ ಸಾಕಷ್ಟು ನಂಟಿದೆ ಎಂದರು.
ದಸರಾ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಾಸುಕಿ ವೈಭವ್ ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರಗಳು ಮಾಲ್ಗಳಾಗಿ ಬದಲಾಗುತ್ತಿವೆ. ಆದರೆ ಶಿವಮೊಗ್ಗದಲ್ಲಿ ಉತ್ತಮ ಚಿತ್ರಮಂದಿರಗಳು ಇರುವುದು ಸಂತಸದ ವಿಚಾರ. ಕಳೆದೆರಡು ವರ್ಷಗಳಲ್ಲಿ ಕೊರೊನಾ ಹಿನ್ನೆಲೆ ಸಾವಿರಾರು ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಿತ್ರಮಂದಿರಗಳನ್ನು ಉಳಿಸಿಕೊಂಡಿರುವುದು ನಿಜಕ್ಕೂ ಸಂತಸ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ನಟಿ ವೀಣಾ ಸುಂದರ್, ನಟ ಸುಂದರ್, ಸಂಗೀತ ನಿರ್ದೇಶಕ ವಿ.ಮನೋರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.