ಕರ್ನಾಟಕ

karnataka

ETV Bharat / city

ಕಲ್ಲು ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿ: ಇಬ್ಬರು ಸಾವು - Tractor accident

ಗೆಜ್ಜೆನಹಳ್ಳಿಯ ಕ್ವಾರಿಯಿಂದ ಕಲ್ಲು ತುಂಬಿಕೊಂಡು‌ ಬರುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿದ್ದು, ಪರಿಣಾಮ ಇಬ್ಬರು‌ ಸಾವನ್ನಪ್ಪಿದ್ದಾರೆ.

ಟ್ರ್ಯಾಕ್ಟರ್ ಪಲ್ಟಿ
ಟ್ರ್ಯಾಕ್ಟರ್ ಪಲ್ಟಿ

By

Published : Dec 23, 2020, 3:49 PM IST

ಶಿವಮೊಗ್ಗ: ಕಲ್ಲು ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಇಬ್ಬರು‌ ಸಾವನ್ನಪ್ಪಿರುವ ಘಟನೆ ಗೆಜ್ಜೆನಹಳ್ಳಿಯಲ್ಲಿ ನಡೆದಿದೆ.

ಮೋಹನ (21) ಸ್ಥಳದಲ್ಲೇ ಸಾವನ್ನಪ್ಪಿದ್ದು, ರಘು ಎಂಬಾತನಿಗೆ ತೀವ್ರ ಗಾಯಗಳಾಗಿತ್ತು. ತಕ್ಷಣ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಗೆಜ್ಜೆನಹಳ್ಳಿಯ ಕ್ವಾರಿಯಿಂದ ಕಲ್ಲನ್ನು ತುಂಬಿಕೊಂಡು‌ ಮೇಲಕ್ಕೆ ಬರುತ್ತಿರುವಾಗ ಟ್ರ್ಯಾಕ್ಟರ್ ಪಲ್ಟಿಯಾಗಿದೆ.

ಈ ಕುರಿತು ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details