ಶಿವಮೊಗ್ಗ: ಕೊರೊನಾ ಹಿನ್ನೆಲೆ ಮುಚ್ಚಿದ್ದ ಶಾಲೆಗಳು ಪುನಾರಂಭವಾಗಿವೆ. ಆದ್ರೆ ಸಾಗರ ತಾಲೂಕಿನ ತುಮರಿ ಗ್ರಾಮದ ಶಾಲೆಗೆ ಈಗ ಅಸ್ತಿತ್ವದ ಪ್ರಶ್ನೆ ಎದುರುರಾಗಿದೆ. ತುಮರಿ ಗ್ರಾಮದ ಸರ್ಕಾರಿ ಶಾಲೆಯ ಕಟ್ಟಡದ ಜಾಗ ಹಾಗೂ ಆಟದ ಮೈದಾನ ಈಗ ಖಾಸಗಿ ವ್ಯಕ್ತಿಯ ಪಾಲಾಗುವ ಆತಂಕ ಸೃಷ್ಟಿಯಾಗಿದೆ.
ತುಮರಿ ಸರ್ಕಾರಿ ಶಾಲೆಗೆ ಕಂಟಕವಾಯ್ತಾ ತಹಶೀಲ್ದಾರ್ ಆದೇಶ? - ಪ್ರತಿಕ್ರಿಯೆ ಶಾಲೆ ಜಾಗ ಖಾಸಗಿ ವ್ಯಕ್ತಿ ಪಾಲು?
1919 ರಲ್ಲಿ ದಿವಾನರ ಕಾಲದಲ್ಲಿ ತುಮರಿ ಗ್ರಾಮದ ಸರ್ವೇ ನಂಬರ್ 24 ರಲ್ಲಿ ಸರ್ಕಾರಿ ಶಾಲೆ ಪ್ರಾರಂಭವಾಯಿತು. ಶಾಲಾ ಕಟ್ಟಡಕ್ಕೆ ಹೊಂದಿಕೊಂಡಂತೆ ಮೂರು ಎಕರೆ ಪ್ರದೇಶದಲ್ಲಿ ಆಟದ ಮೈದಾನವಿದೆ. ಇದೇ ಮೈದಾನದ ಪಕ್ಕದಲ್ಲಿ ಪ್ರೌಢಶಾಲೆ ಇದೆ ಹಾಗೂ ಕಾಲೇಜಿನ ಕ್ರೀಡಾ ಕೂಟಗಳು ಇಲ್ಲೇ ನಡೆಯುತ್ತಿದ್ದವು. 2020ರ ಏಪ್ರಿಲ್ ತಿಂಗಳಲ್ಲಿ ಸಾಗರ ತಹಶೀಲ್ದಾರ್ ಅವರು ಸರ್ಕಾರಿ ಶಾಲೆಗೆ ಸೇರಿದ ಪ್ರದೇಶದ ಖಾತೆಯನ್ನು ಸ್ಥಳ ಪರಿಶೀಲನೆ ಮಾಡದೇ ಖಾಸಗಿ ವ್ಯಕ್ತಿಗೆ ಮಂಜೂರು ಮಾಡಿದ್ದಾರೆ ಎಂಬ ಆರೋಪವಿದೆ. ಇದರಿಂದ ಸರ್ಕಾರಿ ಶಾಲೆ ಕಟ್ಟಡ ಹಾಗೂ ಪಕ್ಕದಲ್ಲಿನ ಮೈದಾನದ ಮಾಲೀಕತ್ವ ಖಾಸಗಿಯವರ ಪಾಲಾಗುವ ಅಪಾಯ ಎದುರಾಗಿದೆ.
ಶತಮಾನ ಕಂಡ ಶಾಲೆ:
ಶತಮಾನ ಕಂಡ ಶಾಲೆಗೆ ಜಾಗ ಹಾಗೂ ಮೈದಾನವನ್ನು ಮಂಜೂರು ಮಾಡಿ ಎಂದು ಶಾಲಾ ಅಭಿವೃದ್ಧಿ ಸಮಿತಿಯು ತಹಶೀಲ್ದಾರ್ ಅವರಿಗೆ ಕಳೆದ ಒಂದು ದಶಕದಿಂದ ಅರ್ಜಿ ಸಲ್ಲಿಸುತ್ತಾ ಬಂದಿದ್ದಾರೆ. ಅರ್ಜಿ ಸಲ್ಲಿಸಿದ ನಡುವೆಯೇ ಖಾಸಗಿ ವ್ಯಕ್ತಿಯ ಹೆಸರಿಗೆ ಮಂಜೂರು ಆಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ತುಮರಿ ಸರ್ಕಾರಿ ಶಾಲೆಗೆ ಕಂಟಕವಾಯ್ತಾ ತಹಶೀಲ್ದಾರ್ ಆದೇಶ? ಇದನ್ನೂ ಓದಿ:ಜಾಮೀನಿನ ಮೇಲೆ ಗ್ರಾಮಕ್ಕೆ ಬಂದಿದ್ದ ಕೊಲೆ ಆರೋಪಿ ಹತ್ಯೆ!
ಖಾತೆ ಬದಲಾವಣೆಯ ಬೆನ್ನಲ್ಲಿಯೇ, ಆಟದ ಮೈದಾನದ ಅಭಿವೃದ್ಧಿಗೆ ಉದ್ಯೋಗ ಖಾತ್ರಿ ಯೋಜನೆಯಡಿ 5 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲು ಮುಂದಾಗಾಗ, ಭೂಮಿ ಪಡೆದ ವ್ಯಕ್ತಿ ಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದಾರೆ. ಇದರಿಂದ ಶತಮಾನೋತ್ಸವ ಆಚರಣೆಗೆ ಮುಂದಾದ ಶಾಲಾ ಸಮಿತಿ ಇಕ್ಕಟ್ಟಿಗೆ ಸಿಲುಕಿದೆ.
ಹೋರಾಟ ಮಾಡಬೇಕಾದ ಅನಿವಾರ್ಯತೆ...
ಖಾತೆ ಹೇಗೆ ಬದಲಾವಣೆ ಆಯಿತು ಎಂಬುದರ ಬಗ್ಗೆ ಗ್ರಾಮಸ್ಥರು ಆಶ್ಚರ್ಯ ವ್ಯಕ್ತಪಡಿಸಿದರೆ, ತಮ್ಮ ಗ್ರಾಮದ ಶಾಲೆಯನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕಾದ ಅನಿವಾರ್ಯತೆ ಬಗ್ಗೆ ಶಾಲಾ ಅಭಿವೃದ್ದಿ ಸಮಿತಿಯವರು ಹಾಗೂ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.