ಕರ್ನಾಟಕ

karnataka

ETV Bharat / city

ಚನ್ನೇನಹಳ್ಳಿ ಬಳಿ ಟ್ರ್ಯಾಕ್ಟರ್ ಪಲ್ಟಿ: 30 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ - ನಲ್ಲೂರು ಪೊಲೀಸ್ ಠಾಣೆ

ದಾವಣಗೆರೆ ಜಿಲ್ಲೆಯ ಚನ್ನೇನಹಳ್ಳಿ ಬಳಿ ಟ್ರ್ಯಾಕ್ಟರ್ ಪಲ್ಟಿಯಾಗಿ 30 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಮದ್ಯ ಸೇವಿಸಿ ಟ್ರ್ಯಾಕ್ಟರ್ ಚಲಾಯಿಸಿರುವುದರಿಂದ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.

Tractor overturned in davanagere
ನಾಮಕರಣಕ್ಕೆ ತೆರಳಿದ್ದ ಟ್ರಾಕ್ಟರ್ ಪಲ್ಟಿ: 30 ಮಂದಿಗೆ ಗಾಯ

By

Published : Apr 10, 2021, 6:57 AM IST

ಶಿವಮೊಗ್ಗ:ದಾವಣಗೆರೆ ಜಿಲ್ಲೆಯ ಚನ್ನೇನಹಳ್ಳಿ ಬಳಿ ಟ್ರ್ಯಾಕ್ಟರ್ ಪಲ್ಟಿಯಾಗಿ 30 ಜನರು ಗಾಯಗೊಂಡಿದ್ದು, ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿವಮೊಗ್ಗ ತಾಲೂಕಿನ ಮಂಡರಘಟ್ಟದ ನಿವಾಸಿಗಳು ನಾಮಕರಣ ಕಾರ್ಯಕ್ರಮಕ್ಕೆಂದು ಚನ್ನಗಿರಿ ತಾಲೂಕಿನ ಚನ್ನೇನಹಳ್ಳಿಗೆ ತೆರಳಿದ್ದರು. ಅಲ್ಲಿನ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್​ ಬರುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ 30 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಾಲಕ ಮದ್ಯ ಸೇವಿಸಿ ಟ್ರ್ಯಾಕ್ಟರ್ ಚಲಾಯಿಸಿರುವುದರಿಂದ ಈ ಅವಘಡ ಸಂಭವಿಸಿದ್ದು, ಈ ಕುರಿತು ನಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ:5 ವರ್ಷದ ಮಗುವಿಗೆ ಚಿಂತ್ರಹಿಂಸೆ ನೀಡಿ ಕ್ರೌರ್ಯ ಮೆರೆದ ಬಾಡಿಗೆ ತಂದೆ-ತಾಯಿ!

ABOUT THE AUTHOR

...view details