ಶಿವಮೊಗ್ಗ:ಶಿವಮೊಗ್ಗ ತಾಲೂಕು ತಾವರೆಕೊಪ್ಪದ ಹುಲಿ- ಸಿಂಹಧಾಮದ ರಾಮ (17) ಹೆಸರಿನ ಹುಲಿ ನಿಧನವಾಗಿದೆ. ವಯೋ ಸಹಜವಾಗಿ ಸಾವನ್ನಪ್ಪಿದೆ ಎಂದು ಧಾಮದ ಸಿಬ್ಬಂದಿ ತಿಳಿಸಿದ್ದಾರೆ. ರಾಮ ಹುಲಿಯು ಹುಲಿ- ಸಿಂಹಧಾಮದಲ್ಲಿಯೇ ಜನಿಸಿತ್ತು. ಸಫಾರಿ ಪ್ರಾರಂಭವಾದಾಗ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿತ್ತು.
ಶಿವಮೊಗ್ಗ ಹುಲಿ - ಸಿಂಹಧಾಮದ 'ರಾಮ' ಹುಲಿ ಸಾವು: ಐದಕ್ಕಿಳಿದ ವ್ಯಾಘ್ರರ ಸಂಖ್ಯೆ - ಶಿವಮೊಗ್ಗದಲ್ಲಿ ಹುಲಿ ಸಾವು
ಶಿವಮೊಗ್ಗದ ಹುಲಿ - ಸಿಂಹಧಾಮದಲ್ಲಿ ಜನಿಸಿದ್ದ ರಾಮ ಹೆಸರಿನ ಹುಲಿ ಬುಧವಾರ ಸಂಜೆ ವಯೋಸಹಜವಾಗಿ ಸಾವನ್ನಪ್ಪಿದೆ.
ರಾಮ' ಹುಲಿ ಸಾವು
ವಯಸ್ಸಾದ ಕಾರಣ ಹುಲಿ ಬುಧವಾರ ಸಂಜೆ ಸಾವನ್ನಪ್ಪಿದ್ದು, ಗುರುವಾರ ಬೆಳಗ್ಗೆ ಅರಣ್ಯ ಇಲಾಖೆಯ ನಿರ್ದೇಶನದಂತೆ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ರಾಮನ ಸಾವಿನಿಂದ ಧಾಮದಲ್ಲಿದ್ದ ಹುಲಿಗಳ ಸಂಖ್ಯೆ 5ಕ್ಕೆ ಇಳಿದಿದೆ ಎಂದು ಸಫಾರಿಯ ಮುಖ್ಯಾಧಿಕಾರಿ ಮುಕುಂದ್ ಚಂದ್ ತಿಳಿಸಿದ್ದಾರೆ.
ಓದಿ:ಮಗನನ್ನುನಾಯಿಗಳೊಂದಿಗೆ ಇಟ್ಟಿದ್ದ ಪೋಷಕರು ಶ್ವಾನ ಪ್ರಿಯರಂತೆ: ಆದರೂ ಕೂಡಿ ಹಾಕಿದ್ದೇಕೆ?