ಶಿವಮೊಗ್ಗ: ಹುಲಿ ಉಗುರು ಮಾರಾಟ ಜಾಲವನ್ನು ಪತ್ತೆ ಹಚ್ಚಿ ಮೂವರನ್ನು ಬಂಧಿಸುವಲ್ಲಿ ದಾವಣಗೆರೆಯ ಪೂರ್ವ ವಲಯ ಐಜಿ ಜಾಗೃತ ದಳ ಯಶಸ್ವಿಯಾಗಿದೆ.
ಹುಲಿ ಉಗುರು ಮಾರಾಟಕ್ಕೆ ಯತ್ನ: ಮೂವರ ಬಂಧನ - ದಾವಣಗೆರೆ ಪೂರ್ವ ವಲಯ ಐಜಿ ಜಾಗೃತ ದಳ
ಶಿವಮೊಗ್ಗದಲ್ಲಿ ಹುಲಿ ಉಗುರು ಮಾರಾಟ ಜಾಲವನ್ನು ಪತ್ತೆ ಹಚ್ಚಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
Arrest
ಓಂಕೇಶ್, ವಿಶ್ವನಾಥ್, ಮೋಹನ್ ಎಂಬ ಆರೋಪಿಗಳನ್ನು ಸಾಗರ ತಾಲೂಕಿನ ಆನಂದಪುರದ ಬಳಿ ಬಂಧಿಸಲಾಗಿದ್ದು, ಜೊತೆಗೆ ಹುಲಿ ಉಗುರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಐಜಿ ದಳದ ಡಿವೈಎಸ್ಪಿ ತಿರುಮಲೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಈ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ.