ಕರ್ನಾಟಕ

karnataka

ETV Bharat / city

ಅಡಕೆ ಕಳ್ಳತನ ಪ್ರಕರಣ: ಶಿವಮೊಗ್ಗದಲ್ಲಿ ಮೂವರ ಬಂಧನ - Bhadravathi police

ಗೋಡೌನ್​ನಲ್ಲಿ ಸಂಗ್ರಹಿಸಿಟ್ಟಿದ್ದ 700 ಕೆಜಿ ಅಡಕೆ ಕಳ್ಳತನ ಮಾಡಿದ್ದ ಮೂವರು ಖದೀಮರನ್ನು ಭದ್ರಾವತಿ ಪೊಲೀಸರು ಬಂಧಿಸಿದ್ದಾರೆ.

areca nut theft case
ಅಡಿಕೆ ಕಳ್ಳತನ ಮಾಡಿದ್ದ ಮೂವರ ಬಂಧನ

By

Published : Jul 12, 2021, 6:46 AM IST

ಶಿವಮೊಗ್ಗ:ಗೋಡೌನ್​ನಲ್ಲಿ ಸಂಗ್ರಹಿಸಿಟ್ಟಿದ್ದ ಅಡಕೆ ಕಳ್ಳತನ ಮಾಡಿದ್ದ ಮೂವರು ಖದೀಮರನ್ನು ಭದ್ರಾವತಿ ಪೊಲೀಸರು ಬಂಧಿಸಿದ್ದಾರೆ. ಭದ್ರಾವತಿಯ ದಾದಾಪೀರ್ (29), ಸಲೀಂ (43) ಹಾಗೂ ಶಫಿವುಲ್ಲಾ (32) ಬಂಧಿತ ಆರೋಪಿಗಳು.

ಭದ್ರಾವತಿಯ ಹಳೇ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನೆಹರು ನಗರದ ಜಾವೀದ್ ಎಂಬುವರ ಗೋಡೌನ್​​​ನಲ್ಲಿ 35 ಕೆಜಿಯ 20 ಚೀಲ ಅಡಕೆ ಕಳ್ಳತನ ಮಾಡಲಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ಪ್ರಾರಂಭಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ 1,29,500 ಮೌಲ್ಯದ ಸುಮಾರು 700 ಕೆಜಿ ಅಡಕೆ ಹಾಗೂ ಕೃತ್ಯಕ್ಕೆ ಬಳಸಿದ್ದ ಟಾಟಾ ಏಸ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ:ಸಾವಿನಲ್ಲೂ ಸಾರ್ಥಕತೆ ಮೆರೆದ ಬಳ್ಳಾರಿ ಮಹಿಳೆ: ಬೆಂಗಳೂರಿನಲ್ಲಿ ವೈದ್ಯರಿಂದ ಯಶಸ್ವಿ ಹೃದಯ ಕಸಿ

ABOUT THE AUTHOR

...view details