ಕರ್ನಾಟಕ

karnataka

ETV Bharat / city

ಶಿವಮೊಗ್ಗದಲ್ಲಿ ರಾತ್ರೋರಾತ್ರಿ ದೇವಾಲಯದ ಹುಂಡಿ ಕಳ್ಳತನ

ಶಿವಮೊಗ್ಗದಲ್ಲಿ ತಡರಾತ್ರಿ ದೇವಾಲಯದಲ್ಲಿ ಕಳ್ಳತನ ನಡೆದಿದೆ. ದೇವಾಲಯದ ಮುಂದಿನ ಬಾಗಿಲನ್ನು ಒಡೆದು ಕಳ್ಳತನ ಮಾಡಲಾಗಿದೆ..

Theft of the temple Hundi in Shivamogga
ಶಿವಮೊಗ್ಗದಲ್ಲಿ ರಾತ್ರೋರಾತ್ರಿ ದೇವಾಲಯದ ಹುಂಡಿ ಕಳ್ಳತನ

By

Published : May 29, 2022, 5:18 PM IST

ಶಿವಮೊಗ್ಗ:ತಾಲೂಕಿನ ಪುರದಾಳು ಗ್ರಾಮದ ಶ್ರೀ ಉದ್ಭವ ಬಸವೇಶ್ವರ ದೇವಾಲಯದಲ್ಲಿ ತಡರಾತ್ರಿ ಕಳ್ಳತನ ನಡೆದಿದೆ. ದೇವಾಲಯ ಮುಂಬಾಗಿಲನ್ನು ಒಡೆದು ಕಳ್ಳರು ದೇವಾಲಯದ ಒಳನುಗ್ಗಿದ್ದು, ದೇವರ ಹುಂಡಿಯನ್ನೇ ಹೊತ್ತೊಯ್ದಿದ್ದಾರೆ. ಅಷ್ಟೇ ಅಲ್ಲ, ದೇವಾಲಯದ ಸಿಸಿಟಿವಿ ಕ್ಯಾಮೆರಾವನ್ನು ಹಾಳು ಮಾಡಿದ್ದಾರೆ.

ಶಿವಮೊಗ್ಗದಲ್ಲಿ ರಾತ್ರೋರಾತ್ರಿ ದೇವಾಲಯದ ಹುಂಡಿ ಕಳ್ಳತನ..

ಮುಂಜಾನೆ ದೇವರ ದರ್ಶನಕ್ಕೆ ಬಂದ ಭಕ್ತಾದಿಗಳು ಕಳ್ಳತನ ಆಗಿರುವುದನ್ನು ಗಮನಿಸಿ ಗ್ರಾಮಸ್ಥರಿಗೆ ಕಳ್ಳತನ ನಡೆದಿರುವ ಬಗ್ಗೆ ತಿಳಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ತುಂಗಾನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಸಿಗಬೇಕಿದೆ.

ಇದನ್ನೂ ಓದಿ:ಕರೆಂಟ್​ಗಾಗಿ ಮಾಡಿದ ಮನವಿ ವ್ಯರ್ಥ.. 6 ತಿಂಗಳಿಂದ ಮೆಸ್ಕಾಂ ಕಚೇರಿಗೇ ಮಿಕ್ಸಿ ತಂದು ಮಸಾಲೆ ರುಬ್ಬುವ ರೈತ

ABOUT THE AUTHOR

...view details