ಕರ್ನಾಟಕ

karnataka

ETV Bharat / city

ಕಳ್ಳರಿಂದ ರಕ್ಷಿಸಿಕೊಳ್ಳಲು ದೊಣ್ಣೆ ಹಿಡಿದು ಜನರಿಂದಲೇ ರಾತ್ರಿ ಗಸ್ತು: ಇದು ಗೃಹ ಸಚಿವರ ಜಿಲ್ಲೆಯ ಪರಿಸ್ಥಿತಿ - ಶಿವಮೊಗ್ಗದ ಗೋಪಾಲಗೌಡ ಬಡಾವಣೆ ಮತ್ತು ಸ್ವಾಮಿ ವಿವೇಕಾನಂದ ಬಡಾವಣೆ

ಶಿವಮೊಗ್ಗದ ಗೋಪಾಲಗೌಡ ಬಡಾವಣೆ ಮತ್ತು ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಕಳ್ಳರು, ದರೋಡೆಕೋರರ ಹಾವಳಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಬಡಾವಣೆಯ ನಿವಾಸಿಗಳೇ ರಾತ್ರಿ ಗಸ್ತು ಶುರು ಮಾಡಿದ್ದಾರೆ.

shivamogga
ಬಡಾವಣೆಯ ನಿವಾಸಿಗಳೇ ರಾತ್ರಿ ಗಸ್ತು

By

Published : Sep 23, 2021, 3:59 PM IST

ಶಿವಮೊಗ್ಗ: ಕಳ್ಳರು, ದರೋಡೆಕೋರರಿಂದ ರಕ್ಷಿಸಿಕೊಳ್ಳಲು ಶಿವಮೊಗ್ಗದ ಬಡಾವಣೆಯೊಂದರ ಜನರು ತಾವೇ ಗಸ್ತು ಆರಂಭಿಸಿದ್ದಾರೆ. ಗೃಹ ಸಚಿವರ ತವರು ಜಿಲ್ಲೆಯಲ್ಲೇ ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಕಳವಳಕ್ಕೆ ಕಾರಣವಾಗಿದೆ.

ಶಿವಮೊಗ್ಗದ ಗೋಪಾಲಗೌಡ ಬಡಾವಣೆ ಮತ್ತು ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಕಳ್ಳರು, ದರೋಡೆಕೋರರ ಹಾವಳಿ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕುವಂತೆ ನಿವಾಸಿಗಳ ಸಂಘದ ವತಿಯಿಂದ ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿತ್ತು. ಆದರೂ ಕಳ್ಳರ ಉಪಟಳ ಕಡಿಮೆಯಾಗದ ಕಾರಣ ಬಡಾವಣೆಯ ನಿವಾಸಿಗಳೇ ರಾತ್ರಿ ಗಸ್ತು ತಿರುಗುತ್ತಿದ್ದಾರೆ.

ಸ್ಥಳೀಯರು ರಾತ್ರಿ ಮತ್ತು ಬೆಳಗಿನ ಸಂದರ್ಭದಲ್ಲಿ ವಾಕಿಂಗ್ ತೆರಳಿದ್ದಾಗ ದರೋಡೆಗಳಾಗುತ್ತಿವೆ. ಇದನ್ನು ತಪ್ಪಿಸಲು ಮತ್ತು ಈ ವೇಳೆ ಸ್ವಯಂರಕ್ಷಣೆ ಮಾಡಿಕೊಳ್ಳುವ ಸಲುವಾಗಿ ಸ್ಥಳೀಯರು ದೊಣ್ಣೆಗಳನ್ನು ಹಿಡಿದುಕೊಂಡು ಸ್ವಯಂ ರಕ್ಷಣೆಗೆ ಮುಂದಾಗಿದ್ದಾರೆ. ಪ್ರತಿರಾತ್ರಿ ನಿರಂತರವಾಗಿ ಗಸ್ತು ಮಾಡುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಮತ್ತೊಂದು ದುರಂತ: ಅನುಮಾನಾಸ್ಪದ ಸ್ಫೋಟದಲ್ಲಿ ಇಬ್ಬರು ದುರ್ಮರಣ

ABOUT THE AUTHOR

...view details