ಕರ್ನಾಟಕ

karnataka

ETV Bharat / city

ಶಿವಮೊಗ್ಗ: ಡಿ.12, 13ಕ್ಕೆ 'ಚಿತ್ರಸಂತೆ' ಕಾರ್ಯಕ್ರಮ ಆಯೋಜನೆ - ಮಕ್ಕಳ ಸಂತೆ

ಡಿ.12 ಮತ್ತು 13 ರಂದು ರಾಜ್ಯದಲ್ಲೇ ಮೊದಲ ಬಾರಿಗೆ ಮಕ್ಕಳು ರಚಿಸಿದ ಚಿತ್ರಗಳನ್ನು 'ಚಿತ್ರಸಂತೆ' ಎಂಬ ಕಾರ್ಯಕ್ರಮದ ಮೂಲಕ ಶಿವಮೊಗ್ಗದಲ್ಲಿ ಪ್ರದರ್ಶನ ಮಾಡಲಾಗುತ್ತಿದೆ.

ಚಿತ್ರಸಂತೆ' ಕಾರ್ಯಕ್ರಮ
ಚಿತ್ರಸಂತೆ' ಕಾರ್ಯಕ್ರಮ

By

Published : Dec 3, 2020, 8:37 AM IST

ಶಿವಮೊಗ್ಗ: ಮೊಟ್ಟಮೊದಲ ಮಕ್ಕಳ ಸಂತೆ ಎಂಬ ಕಾರ್ಯಕ್ರಮವನ್ನು ಡಿ.12 ಮತ್ತು 13 ರಂದು ನಗರದ ಕುವೆಂಪು ರಂಗಮಂದಿರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನೀನಾಸಂ ಪದವೀಧರರು ಹಾಗೂ ಚಲನಚಿತ್ರ ಕಲಾವಿದ ಜಿ.ಚನ್ನಕೇಶವ ಅವರು ತಿಳಿಸಿದರು.

ಚಲನಚಿತ್ರ ಕಲಾವಿದ ಜಿ.ಚನ್ನಕೇಶವ ಅವರಿಂದ ಚಿತ್ರಸಂತೆ ಕುರಿತು ಮಾಹಿತಿ

ಈ ಕುರಿತು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕೊರೊನಾ ಹಿನ್ನೆಲೆ ಎಲ್ಲಾ ಚಟುವಟಿಕೆಗಳು ಸ್ತಬ್ಧಗೊಂಡಿದ್ದವು. ಅಂತಹ ಸಂದರ್ಭದಲ್ಲಿ ಮಕ್ಕಳಿಗಾಗಿ ಏನಾದರೂ ಮಾಡಬೇಕೆಂಬ ಎಂಬ ನಮ್ಮ ಉದ್ದೇಶಕ್ಕೆ ಅವಕಾಶ ಸಿಕ್ಕಿದ್ದು, ಹಾಗಾಗಿ ಆರು ತಿಂಗಳು ಆನ್​ಲೈನ್​ನಲ್ಲಿ ಮಕ್ಕಳಿಗೆ ಪೇಂಟಿಂಗ್, ಚಿತ್ರಕಲೆ ಸೇರಿದಂತೆ ಅನೇಕ ರೀತಿಯ ಚಟುವಟಿಕೆಗಳನ್ನು ಕಲಿಸಲಾಗಿದೆ. ಅದರ ಭಾಗವಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ಚಿತ್ರಸಂತೆ ಎಂಬ ಕಾರ್ಯಕ್ರಮದ ಮೂಲಕ ಮಕ್ಕಳು ರಚಿಸಿದ ಚಿತ್ರಗಳನ್ನು ಪ್ರದರ್ಶನ ಹಾಗೂ ಖರೀದಿ ಹಮ್ಮಿಕೊಳ್ಳಲಾಗಿದೆ ಎಂದರು.

ಚಿತ್ರ ಪ್ರದರ್ಶನ ಮತ್ತು ಮಾರಾಟದ ಜೊತೆಗೆ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಸಹ ಆಯೋಜಿಸಲಾಗಿದೆ. 4 ನೇ ತರಗತಿ ಮಕ್ಕಳಿಗೆ ಶಾಲೆ ಹಾಗೂ 5 ರಿಂದ 8 ತರಗತಿ ಮಕ್ಕಳಿಗೆ ಪ್ರಕೃತಿ ಮತ್ತು 8 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ ರೈತ ಎಂಬ ವಿಷಯದ ಕುರಿತು ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳಿಗೆ 100 ರೂ. ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details