ಕರ್ನಾಟಕ

karnataka

ETV Bharat / city

ಕುಡಿದ ಮತ್ತಿನಲ್ಲಿ ಕುತ್ತಿಗೆ ಮೇಲೆ ಕಾಲಿಟ್ಟು ತಾಯಿಯನ್ನೇ ಕೊಂದ ಪಾಪಿ ಮಗ

ಕುಡಿದ ಮತ್ತಿನಲ್ಲಿ ಪುತ್ರನೇ ತಾಯಿಯ ಕುತ್ತಿಗೆ ಮೇಲೆ ಕಾಲಿಟ್ಟು ಹತ್ಯೆ ಮಾಡಿರುವ ಘಟನೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬುಳ್ಳಾಪುರದಲ್ಲಿ ನಡೆದಿದೆ.

ಕೊಲೆ
murder

By

Published : Sep 15, 2021, 7:08 AM IST

Updated : Sep 15, 2021, 7:59 AM IST

ಶಿವಮೊಗ್ಗ: ಕುಡಿದ ಮತ್ತಿನಲ್ಲಿ ತಾಯಿಯ ಕುತ್ತಿಗೆ ಮೇಲೆ ಕಾಲಿಟ್ಟು ಮಗನೇ ಕೊಲೆ ಮಾಡಿರುವ ಘಟನೆ ತಾಲೂಕಿನ ಬುಳ್ಳಾಪುರದಲ್ಲಿ ನಡೆದಿದೆ. ಬುಳ್ಳಾಪುರದ‌ ನಿವಾಸಿ ವನಜಾಕ್ಷಿ (45) ಮಗನಿಂದಲೇ ಮೃತರಾದ ತಾಯಿ. ಮಗ ದೇವರಾಜ ನಾಯ್ಕ(27) ಕುಡಿದು ತಾಯಿಯ ಜೊತೆ ಜಗಳ ಮಾಡಿದ್ದಾನೆ. ಈ ವೇಳೆ, ಜಗಳ ತಾರಕಕ್ಕೆ ಹೋಗಿದ್ದು, ಕೆಳಗೆ ಬಿದ್ದ ವನಜಾಕ್ಷಿ ಕುತ್ತಿಗೆ ಮೇಲೆ ಕಾಲಿಟ್ಟು ದೇವರಾಜ ಜೋರಾಗಿ ತುಳಿದಿದ್ದಾನೆ. ಪರಿಣಾಮ ತಾಯಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಇದನ್ನು ಓದಿ:ಯಾದಗಿರಿಯಲ್ಲಿ ಪೈಶಾಚಿಕ ಕೃತ್ಯ: ಮಹಿಳೆಯನ್ನ ನಗ್ನಗೊಳಿಸಿ ಮನ ಬಂದಂತೆ ಥಳಿಸಿದ ದುರುಳರು

ವನಜಾಕ್ಷಿ, ದೇವರಾಜ್ ಹಾಗೂ ಆಕೆಯ ಗಂಡ ಲೋಕೇಶ್ ನಾಯ್ಕ ಮೂವರು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ನಿತ್ಯ ಮೂವರು ಕುಡಿದು ಗಲಾಟೆ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಈ ಕುರಿತು ಮಗನ ವಿರುದ್ಧ ಲೋಕೇಶ್ ನಾಯ್ಕ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ಇದನ್ನು ಓದಿ:ಅಪ್ರಾಪ್ತೆಯೊಂದಿಗೆ ಪ್ರೀತಿಸುವ ನಾಟಕವಾಡಿ ಅತ್ಯಾಚಾರ ಆರೋಪ: ಯುವಕ ಅಂದರ್​​!

Last Updated : Sep 15, 2021, 7:59 AM IST

ABOUT THE AUTHOR

...view details