ಶಿವಮೊಗ್ಗ:ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರುದ್ರೇಗೌಡರು, ಜಿಲ್ಲೆಯ ಪ್ರಬುದ್ಧ ಜನರು ಬಿಜೆಪಿಯನ್ನು ನಿರೀಕ್ಷೆಯ ಮಟ್ಟಕ್ಕಿಂತ ಹೆಚ್ಚಿನ ಮತನೀಡಿ ಗೆಲ್ಲಿಸಿದ್ದಾರೆ. ಚುನಾವಣೆ ಮುಗಿದಿದೆ ಇನ್ನೇನಿದ್ದರೂ ಜಿಲ್ಲೆಯ ಅಭಿವೃದ್ಧಿಯತ್ತ ನಮ್ಮ ಗಮನ ಎಂದರು.
ಸರ್ಕಾರದ ಮಲತಾಯಿ ಧೋರಣೆ ನಮ್ಮ ಗೆಲುವಿಗೆ ಕಾರಣ: ಎಸ್ ರುದ್ರೇಗೌಡ
ಮೋದಿ ಅಲೆ, ಬಿಜೆಪಿಯ ಸಂಘಟಿತ ಪ್ರಯತ್ನ, ದೇಶದ ರಕ್ಷಣೆ ವಿಚಾರ, ಯುವಕರಿಗೆ ಹೊಸ ಭರವಸೆ ಮತ್ತು ಬಿ.ವೈ ರಾಘವೇಂದ್ರ ಮಾಡಿದ ಸಾಧನೆ, ಬಿಎಸ್ವೈ ಜಿಲ್ಲೆಗೆ ನೀಡಿದ ಕೊಡುಗೆ ಮುಂತಾದ ಕಾರಣಗಳು ಹಾಗೂ ಸರ್ಕಾರದ ಮಲತಾಯಿ ಧೋರಣೆ ನಮ್ಮ ಗೆಲುವಿಗೆ ಕಾರಣವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಸ್ ರುದ್ರೇಗೌಡ ಹೇಳಿದರು
ಒಟ್ಟಾರೆ ಮೋದಿ ಜನಪ್ರಿಯತೆ ಮತ್ತಷ್ಟು ಹೆಚ್ಚಿದ್ದು, ಭವ್ಯ ಭಾರತದ ಭರವಸೆ ಮೂಡಿದೆ. ಜಗತ್ತೇ ಮೆಚ್ಚುವಂಥ ಆಡಳಿತವನ್ನು ಮೋದಿಯವರು ನೀಡಲಿದ್ದಾರೆ ಎಂದರು.ಜಿಲ್ಲೆಯಲ್ಲಿ ಹಲವು ಕೆಲಸಗಳು ಬಾಕಿ ಉಳಿದುಕೊಂಡಿದೆ. ನೂತನವಾಗಿ ಆಯ್ಕೆಯಾಗಿರುವ ಸಂಸದ ಬಿ.ವೈ ರಾಘವೇಂದ್ರ ಅವರು ಅಭಿವೃದ್ಧಿಗೆ ಹೆಚ್ಚು ಆದ್ಯತೆ ಕೊಡಲಿದ್ದಾರೆ. ಪ್ರಮುಖವಾಗಿ ಜಿಲ್ಲೆಯಲ್ಲಿ ಕೈಗಾರಿಕಾ ಕ್ರಾಂತಿ ಆಗಲಿದೆ. ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಭದ್ರಾವತಿಯಲ್ಲಿ ನಿಂತು ಹೋದ ಮತ್ತು ನಿಶ್ಚಲ ಸ್ಥಿತಿಯಲ್ಲಿರುವ ಎರಡು ಕಾರ್ಖಾನೆಗಳ ಪುನಶ್ಚೇತನಕ್ಕೆ ಶ್ರಮಿಸಿ ಕಾರ್ಮಿಕರ ಬಾಳನ್ನು ಹಸನು ಮಾಡುವ ಕೆಲಸವನ್ನು ಮಾಡಲಿದ್ದಾರೆ. ನೀರಾವರಿ ಯೋಜನೆಗಳು, ವಿಮಾನ ನಿಲ್ದಾಣ ಸ್ಥಾಪನೆ, ಬಗರುಕುಂ ಸಮಸ್ಯೆಯಲ್ಲಿ ರೈತರಿಗೆ ನೆರವು ಮುಂತಾದ ಹಲವು ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದರು.
TAGGED:
shimogga