ಶಿವಮೊಗ್ಗ: ಎದುರುಗಡೆ ಬರುತ್ತಿದ್ದ ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸಾಗರ ಶಾಸಕ ಹರತಾಳು ಹಾಲಪ್ಪ ಕಾರು ಕಾಡಿನ ಗುಂಡಿಗೆ ಹೋಗಿ ಬಿದ್ದಿದೆ.
ಸಾಗರ ಶಾಸಕರ ಕಾರು ಅಪಘಾತ... ಹರತಾಳು ಹಾಲಪ್ಪ ಸೇಫ್ - halappa
ಸಾಗರದ ಶಾಸಕ ಹಾಲಪ್ಪ ಆನಂದಪುರದಿಂದ ಸಾಗರದ ಕಡೆಗೆ ಬರುವಾಗ ಕಾಸ್ಪಾಡಿಯ ತಿರುವಿನ ಬಳಿ ಎದುರುಗಡೆ ಬಂದ ಟ್ರಾಕ್ಟರ್ಗೆ ಶಾಸಕರ ಕಾರು ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಾಡಿಗೆ ಕಾರು ನುಗ್ಗಿದೆ.
ಸಾಗರದ ಶಾಸಕ ಹಾಲಪ್ಪ ಆನಂದಪುರದಿಂದ ಸಾಗರದ ಕಡೆಗೆ ಬರುವಾಗ ಕಾಸ್ಪಾಡಿಯ ತಿರುವಿನ ಬಳಿ ಎದುರುಗಡೆ ಬಂದ ಟ್ರಾಕ್ಟರ್ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಾಡಿಗೆ ಕಾರು ನುಗ್ಗಿದೆ. ಈ ವೇಳೆ ಕಾರು ಕಾಡಿನ ಒಳಗೆ ಪ್ರವೇಶ ಮಾಡದಂತೆ ಹಾಕಿರುವ ಟ್ರಂಚ್ಗೆ ಕಾರು ಡಿಕ್ಕಿ ಹೊಡೆದು ನಿಂತಿದೆ.
ಈ ವೇಳೆ ಕಾರಿನಲ್ಲಿ ಶಾಸಕ ಹಾಲಪ್ಪ ಹಾಗೂ ಬಿಜೆಪಿ ಬೆಂಬಲಿಗರು ಇದ್ದರು. ಅದೃಷ್ಟವಶಾತ್ ಕಾರಿನಲ್ಲಿದ್ದ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಈ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
TAGGED:
halappa