ಕರ್ನಾಟಕ

karnataka

ETV Bharat / city

ಮಹಿಳಾ ಮೀಸಲು ಅಗತ್ಯವೇ.. ಸುಧಾಮೂರ್ತಿ ವಿದ್ಯಾರ್ಥಿಗಳಿಗೆ ಹೇಳಿದ ಕಿವಿ ಮಾತೇನು?.. VIDEO - ರಾಷ್ಟ್ರೀಯ ಶಿಕ್ಷಣ ಸಮಿತಿ ಅಮೃತ ಮಹೋತ್ಸವ

ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತ ಮಹೋತ್ಸವ ವರ್ಷಾಚರಣೆ ನಿಮಿತ್ತ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳೊಂದಿಗೆ ಮಹಿಳಾ ಸಬಲೀಕರಣದ ಕುರಿತು ಚರ್ಚೆ ನಡೆಸಿದರು.

ಸುಧಾಮೂರ್ತಿ
ಸುಧಾಮೂರ್ತಿ

By

Published : Apr 6, 2022, 9:34 AM IST

Updated : Apr 6, 2022, 9:49 AM IST

ಶಿವಮೊಗ್ಗ: ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತ ಮಹೋತ್ಸವ ವರ್ಷಾಚರಣೆ ನಿಮಿತ್ತ ಕಮಲಾ ನೆಹರೂ ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನಲ್ಲಿ ಎರಡನೇ ಉಪನ್ಯಾಸ ಮಾಲಿಕೆಯ ಭಾಗವಾಗಿ 'ಮಹಿಳಾ ಸಬಲೀಕರಣ-ಏಕೆ?, ಹೇಗೆ? ಎಂಬ ವಿಷಯದ ಕುರಿತು ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ವಿದ್ಯಾರ್ಥಿಗಳೊಂದಿಗೆ ಸುಧಾಮೂರ್ತಿ ಸಂವಾದ

ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪ್ರಥಮ ಉಪನ್ಯಾಸ ಮಾಲಿಕೆಯನ್ನು ಇಸ್ರೋ ಮಾಜಿ ಅಧ್ಯಕ್ಷ ಕೆ.ಶಿವನ್ ನಡೆಸಿಕೊಟ್ಟಿದ್ದರು. ಮಹಿಳಾ ಸಬಲೀಕರಣ,ಅಭಿವೃದ್ಧಿ, ಜೀವನದ ಆಗು - ಹೋಗುಗಳ ಕುರಿತು ಪ್ರಶ್ನೆಗಳನ್ನು ಕೇಳಿ ವಿದ್ಯಾರ್ಥಿನಿಯರು ಉತ್ತರ ಪಡೆದರು.

ಸಂವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಧ್ಯಕ್ಷ ಬಿ.ಎಸ್.ನಾರಾಯಣ್ ರಾವ್ ವಹಿಸಿದ್ದರು. ಈ ವೇಳೆ ಸಿ.ಆರ್.ನಾಗರಾಜ್, ನಾರಾಯಣ್, ಎಸ್.ಎನ್.ನಾಗರಾಜ್ ರಮೇಶ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ:ವಿದ್ಯಾರ್ಥಿ ಅಪಹರಿಸಿ, ಲೈಂಗಿಕ ದೌರ್ಜನ್ಯ ಎಸಗಿ‌ ಪರಾರಿಯಾಗಿದ್ದ ಆರೋಪಿಗಳ‌‌‌ ಮೇಲೆ‌ ಪೊಲೀಸರಿಂದ ಫೈರಿಂಗ್

Last Updated : Apr 6, 2022, 9:49 AM IST

ABOUT THE AUTHOR

...view details