ಕರ್ನಾಟಕ

karnataka

ETV Bharat / city

ಖಾಕಿ ಪಡೆ ನೋಡಿ ಪರಾರಿಯಾಗಲು ಯತ್ನಿಸಿದವರ ಬ್ಯಾಗ್​ನಲ್ಲಿ ರಾಶಿ ರಾಶಿ ಮೊಬೈಲ್​! - ಶಿವಮೊಗ್ಗದಲ್ಲಿ ಮೊಬೈಲ್ ಕಳ್ಳರ ಬಂಧನ

ಮೊಬೈಲ್ ಕಳ್ಳರ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರು ಭದ್ರಾವತಿಯ ಸೀಗೆಬಾಗಿ ಗಣಪತಿ ದೇಗುಲದ ಬಳಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಮೊಬೈಲ್​ ಕಳ್ಳರು ಸಿಕ್ಕಿಹಾಕಿಕೊಂಡಿದ್ದಾರೆ.

stolen mobile phones seized in Shimoga
stolen mobile phones seized in Shimoga

By

Published : Dec 18, 2021, 3:05 AM IST

Updated : Dec 18, 2021, 7:51 PM IST

ಶಿವಮೊಗ್ಗ:ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿರುವ ಬೈಕ್ ಸವಾರರನ್ನು ಹಿಡಿದು ಅವರ ಕೈಯಲ್ಲಿದ್ದ ಬ್ಯಾಗ್ ತಪಾಸಣೆಗೊಳಪಡಿಸಿದಾಗ ರಾಶಿ-ರಾಶಿ ಮೊಬೈಲ್ ಪತ್ತೆಯಾಗಿವೆ. ಇಬ್ಬರನ್ನು ಬಂಧಿಸಿರುವ ಪೊಲೀಸರು ಮೊಬೈಲ್​​ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಭದ್ರಾವತಿ ಹೊಸಮನೆ ಬಡಾವಣೆಯ ಶ್ರೀನಿವಾಸ್ ಅಲಿಯಾಸ್ ಸೀನಾ (26) ಮತ್ತು ದುರ್ಗಿನಗರದ ಅಜಾಮ್ ಅಲಿಯಾಸ್ ಬಾಬು (38) ಬಂಧಿತ ಆರೋಪಿಗಳು.

ಖಾಕಿ ಪಡೆ ನೋಡಿ ಪರಾರಿಯಾಗಲು ಯತ್ನಿಸಿದವರ ಬ್ಯಾಗ್​ನಲ್ಲಿ ರಾಶಿ ರಾಶಿ ಮೊಬೈಲ್​!

ಬ್ಯಾಗ್​​ನಲ್ಲಿದ್ದವು ರಾಶಿ ರಾಶಿ ಮೊಬೈಲ್​:ಮೊಬೈಲ್ ಕಳ್ಳರ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರು ಭದ್ರಾವತಿಯ ಸೀಗೆಬಾಗಿ ಗಣಪತಿ ದೇಗುಲದ ಬಳಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಬೈಕ್​​ನಲ್ಲಿ ಬಂದ ಇಬ್ಬರು ಯುವಕರು ಪೊಲೀಸರನ್ನು ಕಂಡು ಪರಾರಿಯಾಗಿಲು ಯತ್ನಿಸಿದ್ದಾರೆ. ಇವರನ್ನು ಹಿಡಿದ ತಪಾಸಣೆಗೊಳಪಡಿಸಲಾಗಿದೆ.

ಬೈಕ್​ ಸವಾರರ ಬಳಿ ಇದ್ದ ಬ್ಯಾಗ್ ಪರಿಶೀಲನೆ ನಡೆಸಿದಾಗ ರಾಶಿ ರಾಶಿ ಮೊಬೈಲ್​ಗಳು ಪತ್ತೆಯಾಗಿವೆ. ವಿವಿಧ ಕಂಪನಿಯ 10 ಲಕ್ಷದ ಮೊಬೈಲ್​ಗಳು ಹಾಗೂ ಲ್ಯಾಪ್​ ಟಾಪ್​ ಪತ್ತೆಯಾಗಿವೆ.

ಇದನ್ನೂ ಓದಿರಿ:Mangalore college Covid: ಮಂಗಳೂರಿನಲ್ಲಿ ಮೂರನೇ ನರ್ಸಿಂಗ್ ಕಾಲೇಜ್​ನಲ್ಲಿ ಕೊರೊನಾ ಸೋಂಕು

ಬ್ಯಾಗ್​ನಲ್ಲಿ 120ಕ್ಕೂ ಹೆಚ್ಚು ಮೊಬೈಲ್​​ಗಳು ಪತ್ತೆಯಾಗಿದ್ದು, ಇವುಗಳ ಮೌಲ್ಯ 10 ಲಕ್ಷ ರೂ. ಎಂದು ಅಂದಾಜು ಮಾಡಲಾಗಿದೆ. ಜೊತೆಗೆ 20 ಸಾವಿರ ರೂ. ಮೌಲ್ಯದ ಲ್ಯಾಪ್ ಟಾಪ್ ಸಿಕ್ಕಿದೆ.ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಕೃತ್ಯಕ್ಕೆ ಬಳಸಿರುವ ಬೈಕ್​ನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ಸಿಪಿಐ ರಾಘವೇಂದ್ರ ಕಾಂಡಿಕೆ ಮಾರ್ಗದರ್ಶನದಲ್ಲಿ ಎ.ಎಸ್.ಐ ಮಹೇಶ್ವರ ನಾಯ್ಕ, ಸಿಬ್ಬಂದಿ ವಿಜಯಕುಮಾರ್, ಪ್ರಸನ್ನ ಸ್ವಾಮಿ, ನವೀನ್ ಪವಾರ್, ಹಾಲಪ್ಪ, ನಾರಾಯಣ ಸ್ವಾಮಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಓಲ್ಡ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Last Updated : Dec 18, 2021, 7:51 PM IST

ABOUT THE AUTHOR

...view details