ಶಿವಮೊಗ್ಗ: ಸ್ಮಾರ್ಟ್ ಸಿಟಿ ಲಿಮಿಟೆಡ್ ಹಾಗೂ ಮಹಾನಗರ ಪಾಲಿಕೆ ವತಿಯಿಂದ ನಗರದಲ್ಲಿ ವಿವಿಧ ಇಲಾಖೆಗಳ ಕಾಮಗಾರಿಗಳು ನಡೆಯುತ್ತಿದ್ದು, ಈ ಕುರಿತು ಶಿವಮೊಗ್ಗ ನಿವಾಸಿಗಳಿಂದ ಅಭಿಪ್ರಾಯ ತಿಳಿದುಕೊಳ್ಳುವ ಸಲುವಾಗಿ ಸರ್ವೇ ಪ್ರಾರಂಭ ಮಾಡಲಾಗಿದೆ ಎಂದು ಶಿವಮೊಗ್ಗ ಸ್ಮಾರ್ಟ್ ಸಿಟಿಯ ಮ್ಯಾನೆಜಿಂಗ್ ಡೈರೆಕ್ಟರ್ ಚಿದಾನಂದ ವಾಟರೆ ತಿಳಿಸಿದ್ದಾರೆ.
ಸ್ಮಾರ್ಟ್ ಸಿಟಿ ಕಾಮಗಾರಿ ಬಗ್ಗೆ ಅಭಿಪ್ರಾಯ ತಿಳಿಯಲು ಸರ್ವೇ ಆರಂಭ: ಚಿದಾನಂದ ವಾಟರೆ - ಶಿವಮೊಗ್ಗ ಸ್ಮಾರ್ಟ್ ಸಿಟಿಯ ಮ್ಯಾನೆಜಿಂಗ್ ಡೈರೆಕ್ಟರ್ ಚಿದಾನಂದ ವಾಟರೆ ಸುದ್ದಿಗೋಷ್ಠಿ
ಸ್ಮಾರ್ಟ್ ಸಿಟಿ ಲಿಮಿಟೆಡ್ ಹಾಗೂ ಮಹಾನಗರ ಪಾಲಿಕೆ ವತಿಯಿಂದ ನಗರದಲ್ಲಿ ವಿವಿಧ ಇಲಾಖೆಗಳ ಕಾಮಗಾರಿಗಳು ನಡೆಯುತ್ತಿದ್ದು, ಈ ಕುರಿತು ಶಿವಮೊಗ್ಗ ನಿವಾಸಿಗಳಿಂದ ಅಭಿಪ್ರಾಯ ತಿಳಿದುಕೊಳ್ಳುವ ಸಲುವಾಗಿ ಸರ್ವೇ ಪ್ರಾರಂಭ ಮಾಡಲಾಗಿದೆ ಎಂದು ಶಿವಮೊಗ್ಗ ಸ್ಮಾರ್ಟ್ ಸಿಟಿಯ ಮ್ಯಾನೆಜಿಂಗ್ ಡೈರೆಕ್ಟರ್ ಚಿದಾನಂದ ವಾಟರೆ ತಿಳಿಸಿದ್ದಾರೆ.
ಶಿವಮೊಗ್ಗದ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿಯ ಕಾಮಗಾರಿಗಳು ಜನತೆಗೆ ತೃಪ್ತಿ ತಂದಿದೆಯೇ ಅಥವಾ ಅವರ ನಿರೀಕ್ಷೆಗಳೇನು? ಎಂಬುದನ್ನು ತಿಳಿದುಕೊಳ್ಳಲು ಆನ್ಲೈನ್ ಹಾಗೂ ಜನರಿಂದ ನೇರವಾಗಿ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಸುಲಲಿತ ಜೀವನ ಸೂಚ್ಯಂಕದಡಿ 50 ಇಂಡಿಕೇಟರ್ಗಳಲ್ಲಿನ 89 ಮಾಹಿತಿ ಮಾಪಕಗಳನ್ನು ಸಂಗ್ರಹಿಸುವ ಗುರಿಯನ್ನು ನೀಡಲಾಗಿದ್ದು, ಇದುವರೆಗೆ 88 ಸೂಚಕಗಳ ಮಾಹಿತಿಯನ್ನು ಅಪ್ಲೋಡ್ ಮಾಡಲಾಗಿದೆ. ಇದರ ಜೊತೆಗೆ ಪೌರ ಕಾರ್ಯಕ್ಷಮತೆಯ ಸೂಚ್ಯಂಕದಲ್ಲಿ 101 ಸೂಚಕಗಳಲ್ಲಿ 151 ಮಾಹಿತಿ ಬಿಂದುಗಳನ್ನು ಸಂಗ್ರಹಿಸುವ ಗುರಿಯನ್ನು ಸಾಧಿಸಲಾಗಿದೆ. ಶಿವಮೊಗ್ಗ ನಾಗರಿಕರಿಗೆ ಸುಲಲಿತ ಜೀವನ ಸೂಚ್ಯಂಕ ಸಮೀಕ್ಷೆ ನಡೆಸುತ್ತಿದ್ದು, ಸಾರ್ವಜನಿಕರಿಂದ ಶಿವಮೊಗ್ಗ ನಗರದ ಮೂಲಸೌಲಭ್ಯ ಹಾಗೂ ಅಗತ್ಯ ಪೂರಕ ವ್ಯವಸ್ಥೆಗಳ ಬಗ್ಗೆ ಅಭಿಪ್ರಾಯ ಸಂಗ್ರಹಕ್ಕೆ ಸ್ಮಾರ್ಟ್ ಸಿಟಿ ಮುಂದಾಗಿದೆ ಎಂದರು.
ಈಗಾಗಲೇ ಎಲ್ಲಾ ದತ್ತಾಂಶಗಳನ್ನು ವೆಬ್ ಸೈಟ್ನಲ್ಲಿ ಹಾಕಲಾಗಿದೆ. ಆನ್ಲೈನ್ನಲ್ಲಿ ತಮ್ಮ ಅಭಿಪ್ರಾಯ ನೀಡುವವರು ಪೋಸ್ಟರ್ನ ಕ್ಯೂಆರ್ ಕೋಡ್ಗೆ ಸ್ಕ್ಯಾನ್ ಮಾಡಿದ್ರೆ ಅಲ್ಲಿ ಸರ್ವೆಯ ಪ್ರಶ್ನಾವಳಿಗಳು ಲಭ್ಯವಾಗುತ್ತವೆ. ಅಲ್ಲಿ ಅವುಗಳಿಗೆ ಉತ್ತರ ನೀಡುತ್ತಾ ಹೋದರೆ ಸಾಕು. ಇನ್ನು eol2019.org/citizenfeedback ಲಿಂಕ್ಗೆ ಹೋದ್ರೆ ಅಲ್ಲಿ 22 ಪ್ರಶ್ನಾವಳಿ ಲಭ್ಯವಾಗುತ್ತವೆ. ಇಲ್ಲಿ ಬಹುಉತ್ತರಗಳಲ್ಲಿ ಆಯ್ಕೆಯನ್ನು ನಮೂದಿಸಬಹುದಾಗಿದೆ. ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು ಹಾಗೂ ಮರಾಠಿ ಭಾಷೆಯಲ್ಲಿಯೂ ಪ್ರಶ್ನೆಗಳು ಲಭ್ಯವಿದೆ. ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆಯ ವತಿಯಿಂದ ಕಾಲೇಜುಗಳಲ್ಲಿ ಮಹಿಳಾ ವಸತಿ ನಿಲಯ, ಕೇಂದ್ರ ಗ್ರಂಥಾಲಯ, ಸಿಟಿ ಮಾಲ್ ಸೇರಿದಂತೆ ಇತರೆ ಕಡೆ ಮಾಹಿತಿಯನ್ನು ಸಂಗ್ರಹ ಮಾಡಲಾಗುತ್ತಿದೆ. ಶಿವಮೊಗ್ಗ ಜನಸಂಖ್ಯೆಯು 3.22 ಲಕ್ಷ ಇದೆ. ಇದರ ಶೇ. 10ರಷ್ಟು ಅಂದ್ರೆ 3,384 ಜನರ ಅಭಿಪ್ರಾಯ ಸಂಗ್ರಹ ಮಾಡಬೇಕಾಗಿದೆ. ಈಗಾಗಲೇ 757 ಜನರ ಅಭಿಪ್ರಾಯವನ್ನು ಆನ್ಲೈನ್ ಹಾಗೂ ಆಫ್ಲೈನ್ನಲ್ಲಿ ಸಂಗ್ರಹ ಮಾಡಲಾಗಿದೆ. ಅದಷ್ಟು ಹೆಚ್ಚಿನ ಜನ ಸರ್ವೆಯಲ್ಲಿ ಭಾಗವಹಿಸಿ, ನಗರದ ಅಭಿವೃದ್ದಿಗೆ ಸಹಕಾರ ನೀಡಬೇಕು ಎಂದು ಸ್ಮಾರ್ಟ್ ಸಿಟಿ ಎಂಡಿ ಚಿದಾನಂದ ವಾಟರೆ ಶಿವಮೊಗ್ಗ ಜನತೆಯಲ್ಲಿ ವಿನಂತಿಸಿಕೊಂಡಿದ್ದಾರೆ.
TAGGED:
Smart City Work Survey news