ಕರ್ನಾಟಕ

karnataka

ETV Bharat / city

ಅಯ್ಯೋ ದುರ್ವಿಧಿಯೇ: ತಾಯಿ ಸಾವಿನ ವಿಷಯ ತಿಳಿಯುವ ಮೊದಲೇ ಮಗ ಕೊರೊನಾಗೆ ಬಲಿ - ಮೆಗ್ಗಾನ್ ಕೋವಿಡ್ ಆಸ್ಪತ್ರೆ

ಸುರೇಶ್ ಸಾಯುವ ಕೆಲವೇ ಗಂಟೆಗಳ ಮುನ್ನ ಅವರ ತಾಯಿ ಗೌರಮ್ಮ ಖಾಸಗಿ ಆಸ್ಪತ್ರೆಯಲ್ಲಿ ವಯೋ ಸಹಜವಾಗಿ ಸಾವನ್ನಪ್ಪಿದ್ದಾರೆ. ಆದರೆ, ತಾಯಿ ಸಾವಿನ ವಿಚಾರ ತಿಳಿಯುವ ಮುನ್ನ ಸುರೇಶ್ ಸಾವನ್ನಪ್ಪಿದ್ದು, ನಿಜಕ್ಕೂ ವಿಧಿಯ ಘೋರತೆ ತೋರಿಸಿದೆ.

son-dies-for-corona-before-the-mother-death-in-shimogga
ತಾಯಿ ಸಾವಿನ ವಿಷಯ ತಿಳಿಯುವ ಮೊದಲೇ ಮಗ ಕೊರೊನಾಗೆ ಬಲಿ

By

Published : May 25, 2021, 8:14 PM IST

ಶಿವಮೊಗ್ಗ: ಕೊರೊನಾ ಸಾಕಷ್ಟು ಕುಟುಂಬಗಳನ್ನು ಅನಾಥ ಪ್ರಜ್ಞೆಯನ್ನು ಕಾಡುವಂತೆ ಮಾಡಿದೆ. ತಾಯಿ ಸತ್ತ ವಿಷಯ ತಿಳಿಯುವ ಮೊದಲೆ ಮಗ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಓದಿ: ಕೊರೊನಾಗೆ ತಾಯಿ, ಮಗ ಬಲಿ: ಮಗನ ಸಾವಿನ ಸುದ್ದಿ ತಿಳಿದ ಬೆನ್ನಲ್ಲೇ ಕಣ್ಮುಚ್ಚಿದ ತಾಯಿ

ಹಲವು ಕುಟುಂಬಗಳಲ್ಲಿ ಗಂಡ ಸತ್ತ ವಿಷಯ ಹೆಂಡತಿಗೆ ತಿಳಿದಿರುವುದಿಲ್ಲ. ಇನ್ನೂ ಮಗ ಸತ್ತ ವಿಷಯ ಪೋಷಕರಿಗೆ ತಿಳಿಯುತ್ತಿಲ್ಲ. ಇಂತಹ ದುಃಸ್ಥಿತಿಯನ್ನು ಕೊರೊನಾ ತಂದಿದೆ. ಶಿವಮೊಗ್ಗದ ಬಸವನಗುಡಿ ಬಡಾವಣೆಯ ನಿವಾಸಿ ಸುರೇಶ್ ಎಂಬುವರು ನಿನ್ನೆ ರಾತ್ರಿ ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಸುರೇಶ್ ಸಾಯುವ ಕೆಲವೇ ಗಂಟೆಗಳ ಮುನ್ನ ಅವರ ತಾಯಿ ಗೌರಮ್ಮ ಖಾಸಗಿ ಆಸ್ಪತ್ರೆಯಲ್ಲಿ ವಯೋ ಸಹಜವಾಗಿ ಸಾವನ್ನಪ್ಪಿದ್ದಾರೆ. ಆದರೆ, ತಾಯಿ ಸಾವಿನ ವಿಚಾರ ತಿಳಿಯುವ ಮುನ್ನಾ ಸುರೇಶ್ ಸಾವನ್ನಪ್ಪಿದ್ದು, ನಿಜಕ್ಕೂ ವಿಧಿಯ ಘೋರತೆ ತೋರಿಸಿದೆ.

ABOUT THE AUTHOR

...view details