ಕರ್ನಾಟಕ

karnataka

ETV Bharat / city

ಬಿಜೆಪಿಯವರು ಸಂವಿಧಾನ ನಾಶ ಮಾಡಲು ಹೊರಟಿದ್ದಾರೆ: ಸಿದ್ದರಾಮಯ್ಯ ಕಿಡಿ - ಪಕ್ಷಾಂತರ ನಿಷೇಧ ಕಾಯ್ದೆ

ಸಂವಿಧಾನದ 10 ನೇ ಶೆಡ್ಯೂಲ್‌ನಲ್ಲಿರುವ ಪಕ್ಷಾಂತರ ನಿಷೇಧ ಕಾಯ್ದೆಯ ಉದ್ದೇಶವನ್ನೇ ಅಮಿತ್ ಷಾ ಹಾಗು ಯಡಿಯೂರಪ್ಪ ನಾಶ ಮಾಡಲು ಹೊರಟಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ರು.

ಬಿಜೆಪಿಯವರು ಸಂವಿಧಾನದ ಉದ್ದೇಶವನ್ನೇ ಹಾಳು ಮಾಡಲು ಹೊರಟ್ಟಿದ್ದಾರೆ: ಸಿದ್ದು

By

Published : Nov 5, 2019, 7:19 PM IST

ಶಿವಮೊಗ್ಗ:ಸಂವಿಧಾನದ 10 ನೇ ಪರಿಚ್ಚೇಧದಲ್ಲಿರುವಪಕ್ಷಾಂತರ ನಿಷೇಧ ಕಾಯ್ದೆಯ ಮೂಲ ಉದ್ದೇಶವನ್ನೇ ಅಮಿತ್ ಷಾ ಹಾಗು ಯಡಿಯೂರಪ್ಪ ನಾಶ ಮಾಡಲು ಹೊರಟಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ರು.

ಸಿಎಂ ಯಡಿಯೂರಪ್ಪ ಅನರ್ಹ ಶಾಸಕರ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿದ್ದು, ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ‌ ನಾನು ಇದ್ನಾ? ಕೋರ್ ಕಮಿಟಿ ಸಭೆಯಲ್ಲಿದ್ದ ಮೂವರಲ್ಲಿ ಆಡಿಯೋ ಕದ್ದವರು ಯಾರು ಎನ್ನುವಂತಾಗಿದೆ ಎಂದು ವ್ಯಂಗ್ಯವಾಡಿದ್ರು.

ಯಡಿಯೂರಪ್ಪನವರು ಅನರ್ಹ ಶಾಸಕರ ಕ್ಷೇತ್ರಗಳಿಗೆ ಮಾತ್ರ ಹೆಚ್ಚಿನ ಅನುದಾನ ನೀಡುತ್ತಿದ್ದು ಅದರ ಅರ್ಥ ಏನು? ಅನರ್ಹರು ಚುನಾವಣೆಯಲ್ಲಿ ಗೆದ್ದು ಬರಲಿದ್ದು ಭವಿಷ್ಯದಲ್ಲಿ ಬಿಜೆಪಿ ಪಕ್ಷ ಸೇರುತ್ತಾರೆ. ಹೀಗಾಗಿಯೇ ಅವರ ಕ್ಷೇತ್ರಗಳಿಗೆ ಹೆಚ್ಚು ಅನುದಾನ ನೀಡಲಾಗುತ್ತಿದೆ ಎಂದರು.

ಚುನಾವಣಾ ಆಯೋಗ ಕೇಂದ್ರ ಸರ್ಕಾರದದ ಕೈಯಲ್ಲಿ‌ದೆ, ಅವರು ಏನು ಹೇಳ್ತಾರೋ ಅದನ್ನವರು ಮಾಡ್ತಾರೆ.ನೀತಿ ಸಂಹಿತೆ ಜಾರಿಯಾಗದೆ ಆಯೋಗ ಚುನಾವಣೆಯ ವೇಳಾಪಟ್ಟಿ ಪ್ರಕಟಿಸೋದನ್ನು ನೀವೆಂದಾದ್ರೂ ನೋಡಿದ್ದೀರಾ? ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಟೀಕಿಸಿದ್ರು.

ABOUT THE AUTHOR

...view details