ಶಿವಮೊಗ್ಗ: ಮನೆ ಹಾಗೂ ರಸ್ತೆ ಅಕ್ಕ - ಪಕ್ಕ ನಿಲ್ಲಿಸುತ್ತಿದ್ದ ಕಾರುಗಳನ್ನು ಎಗರಿಸುತ್ತಿದ್ದ ಖದೀಮನೋರ್ವನನ್ನು ಕೊನೆಗೂ ಇಲ್ಲಿನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿವಮೊಗ್ಗದಲ್ಲಿ ಕಳುವಾಗಿದ್ದ ಕಾರು ವಿಜಯಪುರದಲ್ಲಿ ಪತ್ತೆ: ಆರೋಪಿ ಅರೆಸ್ಟ್ - ಶಿವಮೊಗ್ಗ ಕಾರು ಕಳ್ಳನ ಬಂಧನ ನ್ಯೂಸ್
ಕಾರುಗಳನ್ನು ಎಗರಿಸುತ್ತಿದ್ದ ಖದೀಮನನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

car Thief
ಆಕಾಶ್ ಬಂಧಿತ ಆರೋಪಿ. ಶಿವಮೊಗ್ಗದ ನೆಹರು ರಸ್ತೆಯ ಕೃಷ್ಣ ಲಾಡ್ಜ್ ಮುಂದೆ ನಿಲ್ಲಿಸಿದ್ದ ಕಾರನ್ನು ಡಿಸೆಂಬರ್ 22 ರಂದು ಕಳ್ಳತನ ಮಾಡಿ, ಜೊತೆಗೆ ಕಾರಿನಲ್ಲಿದ್ದ 41 ಸಾವಿರ ರೂ. ಗಳನ್ನು ತೆಗದುಕೊಂಡು ಪರಾರಿಯಾಗಿದ್ದ. ಈ ಕುರಿತು ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಭುಯಾರ್ ಗ್ರಾಮದಲ್ಲಿ ಬಂಧಿಸಿದ್ದಾರೆ.
ಕಾರಿನ ಬೆಲೆ 12 ಲಕ್ಷ ರೂ. ಗಳಾಗಿದ್ದು, ಕಾರಿನ ಸಮೇತ ಆರೋಪಿಯನ್ನು ಬಂಧಿಸಿದ ಕೋಟೆ ಪೊಲೀಸರಿಗೆ ಎಸ್.ಪಿ. ಶಾಂತರಾಜು ಅಭಿನಂದನೆ ಸಲ್ಲಿಸಿದ್ದಾರೆ.
Last Updated : Dec 28, 2019, 7:24 AM IST