ಕರ್ನಾಟಕ

karnataka

ETV Bharat / city

ಬಹುಮತವಿಲ್ಲದೇ ಬಿಎಸ್​ವೈ ಪ್ರಮಾಣ; ತವರು ಕ್ಷೇತ್ರದಲ್ಲೇ ವಿರೋಧ - youth cong protest.

ಬಹುಮತವಿಲ್ಲದೇ ಬಿ.ಎಸ್.ಯಡಿಯೂರಪ್ಪ  ಪ್ರಮಾಣವಚನ ಸ್ವೀಕರಿಸಿದ್ದು ಖಂಡನೀಯ ಎಂದು ಶಿವಮೊಗ್ಗ ನಗರ ವಿಧಾನಸಭಾ ಯುವ ಕಾಂಗ್ರೆಸ್ ನಿಂದ ಗಾಂಧಿ ಪಾರ್ಕ್​ನಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಯಿತು.

ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಬಿಎಸ್​ವೈಗೆ ತವರು ಕ್ಷೇತ್ರದಲ್ಲೇ ವಿರೋಧ

By

Published : Jul 27, 2019, 4:57 PM IST

ಶಿವಮೊಗ್ಗ: ಬಹುಮತವಿಲ್ಲದೇ ಬಿ.ಎಸ್.ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ್ದು ಖಂಡನೀಯ ಎಂದು ಶಿವಮೊಗ್ಗ ನಗರ ವಿಧಾನಸಭಾ ಯುವ ಕಾಂಗ್ರೆಸ್ ಕಾರ್ಯಕರ್ತರು ಗಾಂಧಿ ಪಾರ್ಕ್​ನಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿದ್ರು.

ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಬಿಎಸ್​ವೈಗೆ ತವರು ಕ್ಷೇತ್ರದಲ್ಲೇ ವಿರೋಧ

ಬಿಜೆಪಿಗೆ ಬಹುಮತ ಇಲ್ಲದೇ ಇದ್ದರೂ ರಾಜ್ಯಪಾಲರು ಯಡಿಯೂರಪ್ಪ ಅವರಿಗೆ ಸರ್ಕಾರ ರಚನೆಗೆ ಅವಕಾಶ ನೀಡಿ ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಈ ಮೂಲಕ ಸಂವಿಧಾನ ಕೊಲೆ ಮಾಡಲು ಹೊರಟಿದ್ದಾರೆ. ಅಧಿಕಾರದ ಆಸೆಗೆ ಶಾಸಕರ ಕುದುರೆ ವ್ಯಾಪಾರ ನಡೆಸಿದ್ದಾರೆ. ಕುದುರೆ ವ್ಯಾಪಾರ ನಡೆಸಲು ಬಿಜೆಪಿಯು ಭ್ರಷ್ಟಚಾರದ ಹಣ ಬಳಸಿದೆ. ರಾಜ್ಯದಲ್ಲಿ ಸಿಎಂ ಆಗಿ ಬಿಎಸ್​ವೈ ‌ ಅಧಿಕಾರ ಸ್ವೀಕಾರ ಮಾಡಿದ್ದು, ಕಾನೂನು ಬಾಹಿರವಾಗಿದೆ. ಇದರಿಂದ ರಾಷ್ಟ್ರಪತಿ ಅವರು ತಕ್ಷಣ ಮಧ್ಯಪ್ರವೇಶ ಮಾಡಬೇಕು ಎಂದು ಆಗ್ರಹಿಸಲಾಯಿತು.

ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್​ನ ನಗರಾಧ್ಯಕ್ಷ ಗಿರೀಶ್, ಜಿಲ್ಲಾ ಕಾಂಗ್ರೆಸ್​ನ ರಂಗನಾಥ್ ಸೇರಿ ಹಲವು ಕಾರ್ಯಕರ್ತರು ಹಾಜರಿದ್ದರು.

For All Latest Updates

ABOUT THE AUTHOR

...view details