ಶಿವಮೊಗ್ಗ: ನಗರದಲ್ಲಿಂದು ಲಾಕ್ಡೌನ್ ಇದ್ದರೂ ಸಹ ಚಿಕನ್, ಮಟನ್ ಅಂಗಡಿಯ ಮುಂದೆ ಜನರು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂತು.
ಭಾನುವಾರದ ಲಾಕ್ಡೌನ್ : ಮಾಂಸದಂಗಡಿ ಮುಂದೆ ಕ್ಯೂನಿಂತ ಜನ - ಶಿವಮೊಗ್ಗ ಲಾಕ್ಡೌನ್
ಶಿವಮೊಗ್ಗ ನಗರದಲ್ಲಿ ಇಂದು ಮಾಂಸ ಅಂಗಡಿಯ ಮುಂದೆ ಜನರು ಸಾಲು ಗಟ್ಟಿ ನಿಂತು ಮಾಂಸ ಖರೀದಿ ಮಾಡುತ್ತಿದ್ದ ದೃಶ್ಯ ಕಂಡು ಬಂತು. ಉಳಿದಂತೆ ಎಲ್ಲಾ ಕಡೆ ಕಟ್ಟುನಿಟ್ಟಿನ ಲಾಕ್ಡೌನ್ ಮಾಡಲಾಗಿದೆ.

ಮಾಂಸದಂಗಡಿ ಮುಂದೆ ಕ್ಯೂನಿಂತ ಜನ
ರಾಜ್ಯದಲ್ಲಿ ಕೋವಿಡ್ ಹರಡುವಿಕೆಯನ್ನು ಹತೋಟಿಗೆ ತರಲು ರಾಜ್ಯ ಸರ್ಕಾರ ಭಾನುವಾರ ಲಾಕ್ಡೌನ್ ಮಾಡಿದ್ದು, ಇಂದು ನಗರದಲ್ಲಿ ಅಗತ್ಯ ವಸ್ತುಗಳ ಖರೀದಿ ಹೊರತು ಪಡಿಸಿ ಉಳಿದೆಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು.
ಮಾಂಸದಂಗಡಿ ಮುಂದೆ ಕ್ಯೂನಿಂತ ಜನ
ಇನ್ನು ನಗರದ ಅನೇಕ ಚಿಕನ್ ಅಂಗಡಿಗಳ ಮುಂದೆ ಜನರು ಸಾಮಾಜಿಕ ಅಂತರ ಕಾಪಾಡಿಕೊಂಡು, ಕ್ಯೂ ನಿಂತು ಚಿಕನ್ ಖರೀದಿ ಜೋರಾಗಿ ಮಾಡುತ್ತಿದ್ದರು. ಮಾಂಸ ಮಾರಾಟ ಅಂಗಡಿಗಳ ಮುಂದೆ ಪೊಲೀಸರನ್ನು ಸಹ ನಿಯೋಜಿಸಲಾಗಿತ್ತು. ಹಾಗಾಗಿ ಗ್ರಾಹಕರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಂಸ ಖರೀದಿ ಮಾಡಿದರು. ಅಲ್ಲದೆ ಕೆಲ ರಸ್ತೆಯಲ್ಲಿ ವಾಹನ ಸಂಚಾರ ಸಹಜವಾಗಿತ್ತು.