ಶಿವಮೊಗ್ಗ:ರೌಡಿ ಶೀಟರ್ ಹಂದಿ ಅಣ್ಣಿಯ ಕೊಲೆ ಹಳೇ ವೈಷಮ್ಯದಿಂದ ನಡೆಸಿದ್ದಾರೆ ಎಂಬ ಶಂಕೆಯಿದೆ ಎಂದು ಎಸ್ಪಿ ಲಕ್ಷ್ಮಿ ಪ್ರಸಾದ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಎಸ್ಪಿ, ರೌಡಿ ಹಂದಿ ಅಣ್ಣಿ ಕೊಲೆ, ದರೋಡೆ, ರಾಬರಿ ಸೇರಿದಂತೆ ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದ. ಈತನ ವಿರುದ್ದ ಶಿವಮೊಗ್ಗ ನಗರದ ವಿವಿಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ. ಈತ ಕಳೆದ ಐದಾರು ವರ್ಷಗಳಿಂದ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರಲಿಲ್ಲ. ಈತ ರೌಡಿ ಪೇರೆಡ್ಗೆ ಬಂದು ಭಾಗಿಯಾಗುತ್ತಿದ್ದ ಎಂದು ಹೇಳಿದರು.
ರೌಡಿಶೀಟರ್ ಕೊಲೆ ಹಳೇ ವೈಷಮ್ಯದಿಂದಲೇ ನಡೆದಿದೆ ಎಂದ ಎಸ್ಪಿ ಓದಿ:ಶಿವಮೊಗ್ಗ: ನಡು ರಸ್ತೆಯಲ್ಲೇ ಕುಖ್ಯಾತ ರೌಡಿ ಹಂದಿ ಅಣ್ಣಿ ಬರ್ಬರ ಕೊಲೆ
ಕಳೆದ ನಾಲ್ಕು ವರ್ಷಗಳಿಂದ ಮರಳು ಹಾಗೂ ಕಲ್ಲು ಗಣಿಗಾರಿಕೆಯಲ್ಲಿ ನಡೆಸುತ್ತಿದ್ದ. ಈ ಹಿಂದೆ ಈತ ಹೆಬ್ಬೆಟ್ಟು ಮಂಜನ ಸಹಚರನಾಗಿದ್ದ. ಇಂದು ಹಂದಿ ಅಣ್ಣಿಯನ್ನು ಇನೋವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಇನ್ನೂ ಕೊಲೆಯಾದ ಸಿಸಿಟಿವಿ ದೃಶ್ಯಗಳು ಲಭ್ಯವಾಗಿದ್ದು, ಇದನ್ನು ಆಧಾರಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದರು.
ಸಿಸಿ ಕ್ಯಾಮೆರಾದಲ್ಲಿ ಕೊಲೆಯ ದೃಶ್ಯ ಸೆರೆಯಾಗಿದೆ. ಸುಮಾರು ಏಳು ಜನರ ಗುಂಪೊಂದು ಹಂದಿ ಅಣ್ಣಿಯನ್ನ ಅಟ್ಟಾಡಿಸಿ ಲಾಂಗು, ಮಚ್ಚುಗಳಿಂದ ನಡು ರಸ್ತೆಯಲ್ಲೇ ಕೊಚ್ಚಿ ಹೋಗಿರುವುದು ಸೆರೆಯಾಗಿದೆ.