ಶಿವಮೊಗ್ಗ: ಕೊರೊನಾ ತಡೆಗಟ್ಟುವ ಹಿನ್ನೆಲೆಯಲ್ಲಿ ಫೇಸ್ ಮಾಸ್ಕ್ ಕಡ್ಡಾಯ ಮಾಡಿದೆ. ಆದರೂ ಹಲವರು ಬೇಜವಾಬ್ದಾರಿ ತೋರಿ ಮಾಸ್ಕ್ ಧರಿಸದೇ ಓಡಾಡುತ್ತಾರೆ. ಅಂತಹವರಿಗೆ ಜಿಲ್ಲಾ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಮಾಸ್ಕ್ ಧರಿಸದೇ ಬಂದವರಿಗೆ ಶಿವಮೊಗ್ಗ ಪೊಲೀಸರಿಂದ ಬಿಸಿ: ಒಂದೇ ದಿನ 52 ಸಾವಿರ ರೂ. ದಂಡ ಸಂಗ್ರಹ - ಮಾಸ್ಕ್ ಕಡ್ಡಾಯ
ಮಾಸ್ಕ್ ಧರಿಸದೇ ಹೊರಬಂದ ಜನರಿಗೆ ಶಿವಮೊಗ್ಗ ಪೊಲೀಸರು ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ. ಒಂದೇ ದಿನದಲ್ಲಿ 393 ಪ್ರಕರಣಗಳನ್ನು ದಾಖಲಿಸಿದ್ದಾರೆ.
ಮಾಸ್ಕ್ ದಂಡ
ಮಂಗಳವಾರ ಒಂದೇ ದಿನ ಜಿಲ್ಲೆಯಾದ್ಯಂತ ಪೊಲೀಸರು, ಮಾಸ್ಕ್ ಹಾಕದವರ ವಿರುದ್ಧ 393 ಪ್ರಕರಣಗಳನ್ನು ದಾಖಲಿಸಿ, 52,800 ರೂ. ದಂಡ ಸಂಗ್ರಹಿಸಿದ್ದಾರೆ.
ಪೊಲೀಸರು ದಂಡ ಹಾಕಿದರೂ ಸಹ ಜನ ಕ್ಯಾರೇ ಎನ್ನದೇ ಮಾಸ್ಕ್ ಧರಿಸದೆ ಹಾಗೇ ತಿರುಗಾಡುತ್ತಿದ್ದಾರೆ.