ಕರ್ನಾಟಕ

karnataka

ETV Bharat / city

ಕಳವಾಗಿದ್ದ ವಸ್ತುಗಳನ್ನು ಮರಳಿ ಮಾಲೀಕರಿಗೆ ನೀಡಿದ ಶಿವಮೊಗ್ಗ ಪೊಲೀಸ್​ ಇಲಾಖೆ

ಪ್ರಾಪರ್ಟಿ ರಿಟರ್ನ್ ಪರೇಡ್ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್​ ಇಲಾಖೆ ವತಿಯಿಂದ ಜಿಲ್ಲೆಯ ವಿವಿಧ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ 4 ಕೋಟಿ 53 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ, ಅಡಿಕೆ ಹಾಗೂ ನಗದು ಹಣವನ್ನು ಪೊಲೀಸ್​ ಇಲಾಖೆ ವತಿಯಿಂದ ವಾರಸುದಾರರಿಗೆ ನೀಡಲಾಯಿತು.

shivamogga police department Property Return Parent Program
ಶಿವಮೊಗ್ಗ ಪೊಲೀಸ್​ ಇಲಾಖೆ

By

Published : Dec 19, 2020, 6:39 PM IST

ಶಿವಮೊಗ್ಗ: ಜಿಲ್ಲಾ ಪೊಲೀಸ್​ ಇಲಾಖೆ ವತಿಯಿಂದ ಜಿಲ್ಲೆಯ ವಿವಿಧ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ 4 ಕೋಟಿ 53 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ, ಅಡಿಕೆ ಹಾಗೂ ನಗದು ಹಣವನ್ನು ಪೊಲೀಸ್​ ಇಲಾಖೆ ವತಿಯಿಂದ ವಾರಸುದಾರಿರಗೆ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್​​ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಹೇಳಿದರು.

ಕಳವಾಗಿದ್ದ ವಸ್ತುಗಳನ್ನು ಮರಳಿ ಮಾಲೀಕರಿಗೆ ನೀಡಿದ ಶಿವಮೊಗ್ಗ ಪೊಲೀಸ್​ ಇಲಾಖೆ

ನಗರದ ಡಿಆರ್ ಸಂಬಾಗಣದಲ್ಲಿ ನಡೆದ ಪ್ರಾಪರ್ಟಿ ರಿಟರ್ನ್ ಪರೇಡ್ ಕಾರ್ಯಕ್ರಮದಲ್ಲಿ ಚಿನ್ನಾಭರಣ ಕಳೆದುಕೊಂಡಿದ್ದ ವಾರಸುದಾರರಿಗೆ ಮರಳಿ ನೀಡಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಎಸ್ಪಿ ಕೆ.ಎಂ.ಶಾಂತರಾಜು, ಅಪರಾಧ ತಡೆ ಮಾಸಾಚರಣೆ ಹಿನ್ನೆಲೆ ಪ್ರಾಪರ್ಟಿ ರಿಟರ್ನ್ ಪರೇಡ್ ಕಾರ್ಯಕ್ರಮದ ಮೂಲಕ ಜಿಲ್ಲೆಯ ವಿವಿಧ ಪೊಲೀಸ್​ ಠಾಣಾ ವ್ಯಾಪ್ತಿಯ 4 ಕೋಟಿ 53 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ, ಅಡಿಕೆ ಹಾಗೂ ದ್ವಿಚಕ್ರ ವಾಹನಗಳನ್ನು ವಾರಸುದಾರರಿಗೆ ನೀಡಲಾಗಿದೆ ಎಂದು ತಿಳಿಸಿದರು.

2 ಕೆಜಿ 800 ಗ್ರಾಂ ಬಂಗಾರ, 2 ಕೆಜಿ 800 ಗ್ರಾಂ ಬೆಳ್ಳಿ ಹಾಗೂ 81 ದ್ವಿಚಕ್ರ ವಾಹನಗಳು ಹಾಗೂ 87 ಲಕ್ಷ ರೂ. ಮೌಲ್ಯದ ಅಡಿಕೆಯನ್ನು ವಾರಸುದಾರರಿಗೆ ಹಸ್ತಾಂತರ ಮಾಡಲಾಗಿದೆ. 2018-19-20ನೇ ಸಾಲಿನ ಕಳ್ಳತನದ 195 ಪ್ರಕರಣಗಳಲ್ಲಿ 372 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಚಿನ್ನಾಭರಣ ಕಳೆದುಕೊಂಡಿದ್ದ ವಾರಸುದಾರರು ಪೊಲೀರಿಗೆ ಧನ್ಯವಾದ ತಿಳಿಸಿ ಸಂತಸ ವ್ಯಕ್ತಪಡಿಸಿದರು.

ABOUT THE AUTHOR

...view details