ಶಿವಮೊಗ್ಗ: ಕೊರೊನಾ ಹರಡದಂತೆ ಮುಂಜಾಗ್ರತೆ ವಹಿಸುವ ನಿಟ್ಟಿನಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಿರುವ ಶಿವಮೊಗ್ಗ ಮಹಾನಗರ ಪಾಲಿಕೆ ಮಾಸ್ಕ್ ಹಾಗೂ ಎಲ್ಲೆಂದರಲ್ಲಿ ಉಗುಳುವವರಿಗೆ ದಂಡ ವಿಧಿಸಲು ಸಿದ್ಧವಾಗಿದೆ.
ಬೇಜವಾಬ್ದಾರಿ ತೊರುವ ಜನರಿಗೆ ಶಿವಮೊಗ್ಗ ಮಹಾನಗರ ಪಾಲಿಕೆಯ ದಂಡ ಪಾಠ - ಕೊರೊನಾ ವೈರಸ್
ಲಾಕ್ಡೌನ್ ಸಡಿಲಗೊಳಿಸಿದ ಹಿನ್ನೆಲೆ ಕೋವಿಡ್ ಭೀತಿ ಮರೆತು ಬೇಜವಾಬ್ದಾರಿ ತೋರುತ್ತಿರುವ ಜನರಿಗೆ ಶಿವಮೊಗ್ಗ ಮಹಾನಗರ ಪಾಲಿಕೆ ಪಾಠ ಕಲಿಸಲು ಮುಂದಾಗಿದ್ದು, ಮಾಸ್ಕ್ ಧರಿಸದಿದ್ದರೆ 100 ರೂ. ಹಾಗೂ ಎಲ್ಲೆಂದರಲ್ಲಿ ಉಗುಳಿದರೆ 500 ರೂ. ದಂಡ ವಿಧಿಸುತ್ತಿದೆ.
ಶಿವಮೊಗ್ಗ ಮಹಾನಗರ ಪಾಲಿಕೆ
ಕೋವಿಡ್ ಭೀಕರತೆಯನ್ನು ಮರೆತಿರುವ ಜನರಿಗೆ ಬುದ್ದಿ ಕಲಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿರುವ ಮಹಾನಗರ ಪಾಲಿಕೆ ಮಾಸ್ಕ್ ಇಲ್ಲದಿದ್ದರೆ 100 ರೂ. ಹಾಗೂ ಉಗುಳಿದರೆ 500 ರೂ. ದಂಡ ಹಾಕುತ್ತಿದೆ.
ಈ ನಿಟ್ಟಿನಲ್ಲಿ ಜನ ಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಸಂಚರಿಸುತ್ತಿರುವ ಪಾಲಿಕೆ ಹೆಲ್ತ್ ಇನ್ ಸ್ಪೆಕ್ಟರ್ ನಿಯಮ ಉಲ್ಲಂಘನೆ ಕಂಡು ಬಂದಲ್ಲಿ ಸ್ಥಳದಲ್ಲಿಯೇ ದಂಡ ವಿಧಿಸುತ್ತಿದ್ದಾರೆ.