ಶಿವಮೊಗ್ಗ: ನಗರದಲ್ಲಿ ಕಳೆದ ನಾಲ್ಕು ದಿನಗಳಿಂದ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ವೇಳೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯರು ದೆಹಲಿ ಹಾಗೂ ರಾಜಸ್ಥಾನ ಪ್ರವಾಸದಲ್ಲಿದ್ದಾರೆ.
ಶಿವಮೊಗ್ಗದಲ್ಲಿ ಉದ್ರಿಕ್ತ ಪರಿಸ್ಥಿತಿ: ದೆಹಲಿ, ರಾಜಸ್ಥಾನ ಪ್ರವಾಸದಲ್ಲಿರುವ ಪಾಲಿಕೆ ಸದಸ್ಯರು - ಶಿವಮೊಗ್ಗ ಪಾಲಿಕೆ ಸದಸ್ಯರ ದೆಹಲಿ ರಾಜಸ್ಥಾನ ಪ್ರವಾಸ
ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯರು ದೆಹಲಿ ಹಾಗೂ ರಾಜಸ್ಥಾನ ಪ್ರವಾಸದಲ್ಲಿದ್ದಾರೆ.
ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿ ರಮೇಶ್ ಹೆಗಡೆ, ಆಶಾ ಚಂದ್ರಪ್ಪ, ಚನ್ನಬಸಪ್ಪ, ಜ್ಞಾನೇಶ್ವರ್, ಸಂಗೀತಾ, ಪ್ರಭಾಕರ್ ಸೇರಿದಂತೆ ನಾಲ್ಕೈದು ಸದಸ್ಯರನ್ನು ಹೊರತುಪಡಿಸಿ ಉಳಿದೆಲ್ಲಾ ಸದಸ್ಯರು ಹಾಗೂ ಪಾಲಿಕೆಯ ಅಧಿಕಾರಿಗಳು ದೆಹಲಿ ಹಾಗೂ ರಾಜಸ್ಥಾನಕ್ಕೆ ತೆರಳಿದ್ದಾರೆ. ಕಳೆದ ಶನಿವಾರ ಇವರು ಶಿವಮೊಗ್ಗದಿಂದ ಹೊರಟು ದೆಹಲಿ ತಲುಪಿದ್ದರು.
ಇದು ಆಡಳಿತಾತ್ಮಕ ಪ್ರವಾಸವಾಗಿದ್ದು, ಸದಸ್ಯರುಗಳು ಅಲ್ಲಿನ ಆಡಳಿತ ಹಾಗೂ ಅಭಿವೃದ್ಧಿಯ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಪ್ರವಾಸಕ್ಕೆ ತೆರಳಿದ್ದ ಪಾಲಿಕೆಯ ಅಯುಕ್ತ ಚಿದಾನಂದ ವಠಾರೆ ಮಾತ್ರ ದೆಹಲಿ ಪ್ರವಾಸ ಮುಗಿಸಿ ವಾಪಸ್ ತೆರಳಿದ್ದಾರೆ. ಉಳಿದವರು ಇಂದು ರಾಜಸ್ಥಾನ ಪ್ರವಾಸ ಮುಂದುವರೆಸಿದ್ದಾರೆ. ಭಾನುವಾರ ನಗರಕ್ಕೆ ವಾಪಸ್ ಆಗಲಿದ್ದಾರೆ ಎನ್ನಲಾಗಿದೆ.