ಶಿವಮೊಗ್ಗ: ಮದುವೆ ಮನೆಯಲ್ಲಿ ಊಟ ಮಾಡಿದ 80ಕ್ಕೂ ಹೆಚ್ಚು ಮಂದಿ ವಿಷಾಹಾರ ಸೇವನೆ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಿವಮೊಗ್ಗ ತಾಲೂಕಿನ ಗೆಜ್ಜೆನಹಳ್ಳಿಯಲ್ಲಿ ನಿನ್ನೆ ಮದುವೆ ನಡೆದಿದೆ. ಮದುವೆಯಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು.
ನಿನ್ನೆ ಎಲ್ಲರೂ ಖುಷಿ ಖುಷಿಯಿಂದ ಮದುವೆಯಲ್ಲಿ ಭಾಗಿ ಊಟ ಮುಗಿಸಿ ಮನೆ ಸೇರಿ ಕೊಂಡಿದ್ದರು. ಆದರೆ, ರಾತ್ರಿ ಆಗುತ್ತಲೆ ಎಲ್ಲರಲ್ಲೂ ಹೊಟ್ಟೆ ನೋವು, ಭೇದಿ ಕಾಣಿಸಿಕೊಂಡಿದೆ. ಹೀಗೆ ವಾಂತಿ ಭೇದಿ ಕಾಣಿಸಿಕೊಂಡ ನಂತರ ಸ್ಥಳೀಯ ಆಸ್ಪತ್ರೆಯಲ್ಲಿ ತೋರಿಸಿದ್ದಾರೆ.