ಕರ್ನಾಟಕ

karnataka

ETV Bharat / city

ಹೊಸನಗರ ಆಹಾರ ತಪಾಸಣಾಧಿಕಾರಿ ದತ್ತಾತ್ರೇಯ ಆತ್ಯಹತ್ಯೆ: ನ್ಯಾಯಕ್ಕಾಗಿ ಪ್ರತಿಭಟನೆ

ಮೌನ ಪ್ರತಿಭಟನೆ ನಡೆಸಿದ ಜಿಲ್ಲಾ ಸರ್ಕಾರಿ ಸಂಘದವರು ದತ್ತಾತ್ರೇಯ ರವರ ಆತ್ಮಹತ್ಯೆಗೆ ಕಾರಣರಾದ ಹೊಸನಗರದ ತಹಶೀಲ್ದಾರ್ ಶ್ರೀಧರ್ ಮೂರ್ತಿ ಸೇರಿದಂತೆ ಇತರೆ ಏಳು ಜನರ ವಿರುದ್ದ ಸೂಕ್ತ ಕ್ರಮ ತೆಗೆದು ಕೊಳ್ಳಬೇಕು ಎಂದು ಆಗ್ರಹಿಸಿದರು. ಅಲ್ಲದೆ ದತ್ತಾತ್ರೇಯ ಕುಟುಂಬದ ಓರ್ವರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸ ನೀಡುವಂತೆ ಒತ್ತಾಯಿಸಿದರು.

By

Published : Dec 9, 2019, 9:01 PM IST

shivamogga-hosanagar-food-inspection-suicide-news
ಹೊಸನಗರ ಆಹಾರ ತಪಾಸಣಾಧಿಕಾರಿ ಆತ್ಯಹತ್ಯೆ ಹಿನ್ನೆಲೆ ನ್ಯಾಯಕ್ಕಾಗಿ ಪ್ರತಿಭಟನೆ

ಶಿವಮೊಗ್ಗ : ಆಹಾರ ನಿರೀಕ್ಷಕ ದತ್ತಾತ್ರೇಯ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ತಕ್ಷಣ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಜಿಲ್ಲಾ ಸರ್ಕಾರಿ ನೌಕರರ ಸಂಘ ಹಾಗೂ ಜಿಲ್ಲಾ ಕಂದಾಯ ಇಲಾಖೆ ನೌಕರರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿ ಕಚೇರಿ‌ ಎದುರು ಮೌನ ಪ್ರತಿಭಟನೆ ನಡೆಸಿದ ನೌಕರರ ಸಂಘದವರು ದತ್ತಾತ್ರೇಯ ರವರ ಆತ್ಮಹತ್ಯೆಗೆ ಕಾರಣರಾದ ಹೊಸನಗರದ ತಹಶೀಲ್ದಾರ್ ಶ್ರೀಧರ್ ಮೂರ್ತಿ ಸೇರಿದಂತೆ ಇತರೆ ಏಳು ಜನರ ವಿರುದ್ದ ಸೂಕ್ತ ಕ್ರಮ ತೆಗೆದು ಕೊಳ್ಳಬೇಕು ಎಂದು ಆಗ್ರಹಿಸಿದರು. ಅಲ್ಲದೆ ದತ್ತಾತ್ರೇಯ ಕುಟುಂಬದ ಓರ್ವರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸ ನೀಡುವಂತೆ ಒತ್ತಾಯಿಸಿದರು.

ಹೊಸನಗರ ಆಹಾರ ತಪಾಸಣಾಧಿಕಾರಿ ಆತ್ಯಹತ್ಯೆ ಹಿನ್ನೆಲೆ ನ್ಯಾಯಕ್ಕಾಗಿ ಪ್ರತಿಭಟನೆ

ದತ್ತಾತ್ರೇಯ ರವರಿಗೆ ಮೇಲಾಧಿಕಾರಿಗಳ ಸಹಾಯ ದೂರಕಿದ್ದರೆ ಈ ರೀತಿಯ ಘಟನೆ ನಡೆಯುತ್ತಿರಲಿಲ್ಲ. ಈ ರೀತಿ ಮುಂದೆ ಯಾರಿಗೂ ಆಗಬಾರದು, ಇದಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘ ಕ್ರಮ ತೆಗೆದು ಕೊಳ್ಳಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ತಿಳಿಸಿದರು.

ನಂತರ ಮಾತನಾಡಿದ ಡಿಸಿ, ಘಟನೆ ನಡೆದಿದ್ದು ದುರದೃಷ್ಟಕರ, ಕೆಳಗಿನ ಅಧಿಕಾರಿಗಳಿಗೆ ಮೇಲಾಧಿಕಾರಿಗಳು ಯಾವಾಗಲೂ ಸಹಾಯಕವಾಗಿರಬೇಕು. ಮೃತ ದತ್ತಾತ್ರೇಯ ರವರು ಕಳೆದ ವರ್ಷ ಕಂದಾಯ ರತ್ನ ಪ್ರಶಸ್ತಿಯನ್ನು ಪಡೆದು ಕೊಂಡಿದ್ದರು. ಅಲ್ಲದೆ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ರವರು ತಮ್ಮ ಗ್ರಾಮ ವಾಸ್ತವ್ಯವನ್ನು ಹೊಸನಗರದ ನಗರ ಗ್ರಾಮದಲ್ಲಿ ಮಾಡಿದ್ದರು. ಇಂತಹ ದಕ್ಷ ಅಧಿಕಾರಿ ವಿರುದ್ದ ಸುಳ್ಳು ಕೇಸು ದಾಖಲು ಮಾಡಿಸಿ, ಕೋರ್ಟ್ ಗೆ ಅಲೆಯುವಂತೆ ಮಾಡಿದ್ದರು ಎಂದು ಹೇಳಿದರು.

ಕೇಸ್ ಅನ್ನು ಖುಲಾಸೆ ಮಾಡಿಸಲು ತಹಶೀಲ್ದಾರ್ ಶ್ರೀಧರ್ ಮೂರ್ತಿ, ಆನಂದ್ ಕಾರ್ವಿ, ನಾಗೇಂದ್ರ ಹಾಗೂ ಇತರರ ಮೂಲಕ ಹಣದ ಬೇಡಿಕೆ ಇಟ್ಟಿದ್ದರು. ನೀನು ಬಂದು ನನ್ನ ಕಾಲನ್ನು ಹಿಡಿದು ಎಲ್ಲರ ಮುಂದೆ ಕ್ಷಮಾಪಣೆ ಕೇಳಿದ್ರೆ, ಕೇಸ್ ನಿಂದ ನಿಮ್ಮನ್ನು ಖುಲಾಸೆ ಮಾಡುವದಾಗಿ ಹೇಳಿದ್ರು, ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ನಮ್ಮ ತಂದೆಯ ಆತ್ಮಕ್ಕೆ ಶಾಂತಿ‌ ಸಿಗಬೇಕಾದರೆ, ಆರೋಪಿಗಳ ವಿರುದ್ದ ಕಾನೂನು ಕ್ರಮ ತೆಗೆದು ಕೊಳ್ಳಬೇಕು ಎಂದು ದತ್ತಾತ್ರೇಯರವರ ಪುತ್ರಿ ಸುಮ ಆಗ್ರಹಿಸಿದರು.

ABOUT THE AUTHOR

...view details