ಕರ್ನಾಟಕ

karnataka

ETV Bharat / city

ಶಿವಮೊಗ್ಗ ಸ್ಫೋಟದಲ್ಲಿ ಮೃತಪಟ್ಟ ಐದು ಮಂದಿಯ ಗುರುತು ಪತ್ತೆ! - ಶಿವಮೊಗ್ಗ ಭೂಕಂಪನ ಸುದ್ದಿ

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹುಣಸೋಡಿನಲ್ಲಿ ನಡೆದ ಸ್ಫೋಟದಲ್ಲಿ ಈವರೆಗೆ 6 ಜನರು ಮೃತರಾಗಿರುವುದು ತಿಳಿದು ಬಂದಿದ್ದು, 5 ಜನರ ಮೃತದೇಹಗಳನ್ನು ಅವರ ಸಂಬಂಧಿಕರು ಗುರುತಿಸಿದ್ದಾರೆ.

shivamogga gelatin blast dead body Identified
ಭಯಾನಕ ಜಿಲೆಟಿನ್​​ ಸ್ಟೋಟ

By

Published : Jan 24, 2021, 7:42 PM IST

ಶಿವಮೊಗ್ಗ: ಗುರುವಾರ ರಾತ್ರಿ ಹುಣಸೋಡಿನಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಮೃತಪಟ್ಟ ಆರು ಮಂದಿ ಪೈಕಿ ಐದು ಮಂದಿ ಗುರುತು ಪತ್ತೆ ಹಚ್ಚಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹುಣಸೋಡಿನಲ್ಲಿ ನಡೆದ ಸ್ಫೋಟದಲ್ಲಿ ಈವರೆಗೆ 6 ಜನರು ಮೃತರಾಗಿರುವುದು ತಿಳಿದು ಬಂದಿದ್ದು, 5 ಜನರ ಮೃತದೇಹಗಳನ್ನು ಅವರ ಸಂಬಂಧಿಕರು ಗುರುತಿಸಿದ್ದಾರೆ.

ಓದಿ-ಕೆಎಸ್‌ಆರ್‌ಟಿಸಿ ಬಸ್​-ಕಾರು ಮುಖಾಮುಖಿ: ಮಹಿಳಾ PSI ಸೇರಿ ನಾಲ್ವರ ದುರ್ಮರಣ

ಮೃತರನ್ನು ಪವನ್ ಕುಮಾರ್ (29) ರಾಯದುರ್ಗ, ಅನಂತಪುರಂ ಜಿಲ್ಲೆ, ಆಂಧ್ರ ಪ್ರದೇಶ. ಜಾವೀದ್ ( 28) ರಾಯದುರ್ಗ, ಅನಂತಪುರಂ ಜಿಲ್ಲೆ, ಆಂಧ್ರ ಪ್ರದೇಶ. ಚೆಲಿಮಾನು ರಾಜು (24) ರಾಯದುರ್ಗ, ಅನಂತಪುರಂ ಜಿಲ್ಲೆ, ಆಂಧ್ರ ಪ್ರದೇಶ. ಪ್ರವೀಣ (36 ) ಅಂತರಗಂಗೆ, ಭದ್ರಾವತಿ ಮತ್ತು ಮಂಜುನಾಥ (35) ಅಂತರಗಂಗೆ ಕ್ಯಾಂಪ್, ಭದ್ರಾವತಿ ಎಂದು ಪತ್ತೆ ಹಚ್ಚಲಾಗಿದೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಯ ನಂತರ ಅವರ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಇನ್ನೊಂದು ಮೃತದೇಹದ ಗುರುತು ಪತ್ತೆಯಾಗುವುದು ಬಾಕಿ ಇದ್ದು, ತನಿಖೆ ಮುಂದುವರೆದಿದೆ ಎಂದು ಹೇಳಿದ್ದಾರೆ.

ABOUT THE AUTHOR

...view details