ಶಿವಮೊಗ್ಗ:ವಿಜಯದಶಮಿ ದಸರಾ ಹಬ್ಬದ ಅಂಗವಾಗಿ ನಗರಕ್ಕೆ ಆಗಮಿಸಿದ ಗಜಪಡೆಗೆ ವಾಸವಿ ಶಾಲೆಯ ಆವರಣದಲ್ಲಿ ಪಾಲಿಕೆ ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ ಮುರುಳಿಧರ್ ಪೂಜೆ ಸಲ್ಲಿಸಿದರು.
ಶಿವಮೊಗ್ಗ ದಸರಾ: ಗಜಪಡೆಗೆ ಪೂಜೆ ಸಲ್ಲಿಸಿ ಬರಮಾಡಿಕೊಂಡ ಪಾಲಿಕೆ ಮೇಯರ್... - ಪಾಲಿಕೆ ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ
ಕೊರೊನಾ ಮಹಾಮಾರಿಯಿಂದಾಗಿ ಈ ಭಾರಿಯ ದಸರಾ ಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಹಾಗಾಗಿ ಯಾವುದೇ ಮೆರವಣಿಗೆ ಇರುವುದಿಲ್ಲಾ, ಆದರೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ರಾಮನಶೆಟ್ಟಿ ಪಾರ್ಕ್ ವರೆಗೆ ಮಾತ್ರ ಗಜಪಡೆ ಬರುತ್ತದೆ. ನಾಳೆ ಫ್ರೀಡಂ ಪಾರ್ಕ್ ನಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ಇರಲಿದೆ.
ಕೊರೊನಾ ಮಹಾಮಾರಿಯಿಂದಾಗಿ ಈ ಭಾರಿಯ ದಸರಾ ಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಹಾಗಾಗಿ ಯಾವುದೇ ಮೆರವಣಿಗೆ ಇರುವುದಿಲ್ಲಾ, ಆದರೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ರಾಮನಶೆಟ್ಟಿ ಪಾರ್ಕ್ ವರೆಗೆ ಮಾತ್ರ ಗಜಪಡೆ ಬರುತ್ತದೆ. ನಾಳೆ ಫ್ರೀಡಂ ಪಾರ್ಕ್ ನಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ಇರಲಿದೆ. ಸಾರ್ವಜನಿಕರಿಗೆ ಅವಕಾಶ ಇರುವುದಿಲ್ಲ, ಎಲ್ಲರೂ ಸ್ಥಳೀಯ ವಾಹಿನಿಗಳಲ್ಲಿ ಹಾಗೂ ಜಾಲತಾಣದಲ್ಲಿ ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಪಾಲಿಕೆ ಮೇಯರ್ ಮಾಹಿತಿ ನೀಡಿದರು.
ಈ ಭಾರಿಯ ದಸರಾದಲ್ಲಿ ಸಾಗರ್, ಭಾನುಮತಿ, ಬಾಳಣ್ಣ ಎಂಬ ಮೂರು ಆನೆಗಳು ಭಾಗವಹಿಸುತ್ತಿವೆ. ಈ ಮೂರು ಆನೆಗಳು ಆರೋಗ್ಯವಾಗಿದ್ದು, ವಿಶೇಷ ಎಂದರೆ ಮೊದಲ ಭಾರಿಗೆ ಬಾಳಣ್ಣ ಎಂಬ ಆನೆ ದಸರಾ ಕಾರ್ಯಕ್ರಮ ದಲ್ಲಿ ಭಾಗವಹಿಸುತ್ತಿದ್ದೆ ಎಂದು ವನ್ಯಜೀವಿ ವೈಧ್ಯಾಧಿಕಾರಿ ವಿನಯ್ ಮಾಹಿತಿ ನೀಡಿದರು.