ಕರ್ನಾಟಕ

karnataka

ETV Bharat / city

ರಾಹುಲ್​ ಗಾಂಧಿ ವಿರುದ್ಧ ಕಟೀಲ್​​ ವಿವಾದಾತ್ಮಕ​​​ ಹೇಳಿಕೆ: ಶಿವಮೊಗ್ಗದಲ್ಲಿ ಕೈ ಕಾರ್ಯಕರ್ತರ ಪ್ರತಿಭಟನೆ - ಶಿವಮೊಗ್ಗ ಜಿಲ್ಲಾ ಸುದ್ದಿ

ಎಐಸಿಸಿ ನಾಯಕ ರಾಹುಲ್​ ಗಾಂಧಿ ಡ್ರಗ್​​ ಅಡಿಟ್​ ಮತ್ತು ಪೆಡ್ಲರ್​ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಅವರ ಹೇಳಿಕೆ ಖಂಡಿಸಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್​ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

congress-activist-protest-against-nalin-kumar-kateel
ಕಾಂಗ್ರೆಸ್​​ ಕಾರ್ಯಕರ್ತರ ಪ್ರತಿಭಟನೆ

By

Published : Oct 19, 2021, 6:51 PM IST

ಶಿವಮೊಗ್ಗ:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಡ್ರಗ್ ಅಡಿಟ್ ಮತ್ತು ಪೆಡ್ಲರ್ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆ ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ನಗರದ ಗೋಪಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ದಿನನಿತ್ಯ ಬಿಜೆಪಿಯ ನಾಯಕರುಗಳು ಬಾಲಿಶತನದ ಹಾಗೂ ಜೋಕರ್ ಹೇಳಿಕೆಗಳನ್ನು ನೀಡುತ್ತಿರುವುದನ್ನು ನೋಡಿದರೆ ದೇಶದಲ್ಲಿ ಬಿಜೆಪಿ ಸಂಸ್ಕೃತಿ ಜೋಕರ್ ಸಂಸ್ಕೃತಿ ಎಂದು ಗೊತ್ತಾಗುತ್ತಿದೆ ಎಂದು ಕಿಡಿಕಾರಿದರು.

ಕೂಡಲೇ ನಳಿನ್ ಕುಮಾರ್ ಕಟೀಲ್ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ವಜಾ ಮಾಡಬೇಕೆಂದು ಎಂದು ಕೈ ಕಾರ್ಯಕರ್ತರು ಆಗ್ರಹಿಸಿ ನಳಿನ್ ಪ್ರತಿಕೃತಿ ದಹಿಸಿದರು.

For All Latest Updates

ABOUT THE AUTHOR

...view details