ಶಿವಮೊಗ್ಗ :ಕಳೆದ ಒಂದು ವರ್ಷದಿಂದ ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದರಿಂದಾಗಿ ಜನ ಸಾಮಾನ್ಯರು ಬೇಸತ್ತಿದ್ದಾರೆ. ಸದ್ಯ ಇದರಿಂದ ಮುಕ್ತಿ ಪಡೆಯಲು ಶಿವಮೊಗ್ಗದ ಜನರು ಪರಿಸರ ಸ್ನೇಹಿ ವಾಹನಗಳತ್ತ ಮುಖ ಮಾಡುತ್ತಿದ್ದಾರೆ.
ತೈಲ ಬೆಲೆ ಹೆಚ್ಚಳದಿಂದ ತತ್ತರಿಸಿರುವ ನಗರದ ಜನರು ಎಲೆಕ್ಟ್ರಿಕ್ ಬೈಕ್ಗಳ ಮೊರೆ ಹೋಗಿದ್ದಾರೆ. ಈವರೆಗೆ ಶಿವಮೊಗ್ಗ ನಗರದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳು ರಸ್ತೆಗಿಳಿದಿವೆ. ಅಲ್ಲದೆ, ಅಧಿಕ ಮೊತ್ತ ತೆತ್ತು ಖರೀದಿ ಮಾಡುವ ಪೆಟ್ರೋಲ್ ಬೈಕ್ಗಳಿಗೆ ಹೋಲಿಸಿದ್ರೆ ನಿರ್ವಹಣೆಯು ತುಂಬಾ ಕಡಿಮೆ.
ಯಾವುದೇ ರೀತಿಯ ಹೆಚ್ಚುವರಿ ಖರ್ಚು ಕೂಡ ಇಲ್ಲ. ಅಲ್ಲದೆ, ವೇಗದ ಮೀತಿ ಕಡಿಮೆ ಇರುವುದರಿಂದ ಅಪಘಾತ ಸಂಭವ ಕಡಿಮೆ. ಇದರ ಜೊತೆಗೆ ಪರಿಸರ ಸ್ನೇಹಿ ಆಗಿರುವುದರಿಂದ ಎಲೆಕ್ಟ್ರಿಕ್ ಬೈಕ್ಗಳತ್ತ ಮಲೆನಾಡಿಗರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.
ಪರಿಸರ ಸ್ನೇಹಿ electric bike ಮೊರೆ ಹೋದ ಶಿವಮೊಗ್ಗ ಜನ ಗಂಟೆಗೆ 40-50 ಕಿ.ಮೀ ಚಲಿಸುವ ಬೈಕ್ಗೆ ಮೂರರಿಂದ ನಾಲ್ಕು ಗಂಟೆಗಳ ಕಾಲ ಬ್ಯಾಟರಿ ಚಾರ್ಜ್ ಮಾಡಿದರೆ ಸಾಕು 70-80 ಕೀ.ಮಿ ದೂರ ಕ್ರಮಿಸಬಹುದು. ಇದಕ್ಕೆ ತಗಲುವ ವೆಚ್ಚ 12-13 ರೂ. ಮಾತ್ರ. ಅಲ್ಲದೆ, ಯಾವುದೇ ಸರ್ವೀಸ್ ಸಹ ಮಾಡಿಸುವಂತಿಲ್ಲ. ಶಬ್ದ ಮಾಲಿನ್ಯವೂ ಇಲ್ಲ. ಹಾಗಾಗಿ, ದುಬಾರಿ ಪೆಟ್ರೋಲ್ ಬೈಕ್ಗಳಿಗೆ ಹೋಲಿಸಿದ್ರೆ ಎಲೆಕ್ಟ್ರಿಕ್ ಬೈಕ್ ಬಳಕೆ ಸವಾರರಿಗೆ ಲಾಭದಾಯಕ.
ಒನ್ ಟೈಮ್ ಇನ್ವೆಸ್ಟ್ಮೆಂಟ್ ಜೊತೆ ಕಡಿಮೆ ಖರ್ಚು ಹೊಂದಿರುವ ವಿದ್ಯುತ್ ಚಾಲಿತ ಬೈಕ್ ಪರಿಸರ ಮಾಲಿನ್ಯ ತಡೆಗೆ ಸೂಕ್ತವೂ ಹೌದು. ಸದ್ಯದ ಬೆಲೆ ಹೆಚ್ಚಳದ ಬಿಸಿಯಿಂದ ತಪ್ಪಿಸಿಕೊಳ್ಳಲು ಇದೊಂದೇ ಉತ್ತಮ ದಾರಿ.